

ಕುಷ್ಟಗಿ: ಮಾದಕ ದ್ರವ್ಯಗಳ ವ್ಯಸನದಿಂದ ಕೌಟುಂಬಿಕ ನೆಮ್ಮದಿ ಹಾಳಾಗುತ್ತದೆ ಎಂದು ಕೊಪ್ಪಳ ವೃತ್ತದ ಸಹಾಯಕ ಔಷಧ ನಿಯಂತ್ರಕ ವೆಂಕಟೇಶ ರಾಠೋಡ್ ಹೇಳಿದರು.
ಅಂತಾರಾಷ್ಟ್ರೀಯ ಮಾದಕ ದ್ರವ್ಯ ಸೇವನೆ ಮತ್ತು ಸಾಗಣೆ ವಿರೋಧಿ ದಿನಾಚರಣೆ ನಿಮಿತ್ತ ತಾಲೂಕು ಔಷಧ ವ್ಯಾಪಾರಿಗಳ ಸಂಘದಿಂದ ಪಟ್ಟಣದ ತಾಲೂಕು ಆಸ್ಪತ್ರೆಯಲ್ಲಿ ಸೋಮವಾರ ಏರ್ಪಡಿಸಿದ್ದ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಕುಟುಂಬದ ಒಬ್ಬ ಸದಸ್ಯ ಮಾದಕ ವ್ಯಸನಿಯಾದರೆ ಆ ಕುಟುಂಬ ಆರ್ಥಿಕ ಹಾಗೂ ಸಾಮಾಜಿಕವಾಗಿ ಪ್ರಗತಿ ಹೊಂದಲು ಸಾಧ್ಯವಿಲ್ಲ. ಮಾದಕ ವಸ್ತುಗಳ ಬಳಕೆ ಹಾಗೂ ಸಾಗಣೆ ತಡೆಗಟ್ಟುವಲ್ಲಿ ಪ್ರತಿಯೊಬ್ಬರ ಸಹಕಾರ ಅತ್ಯಗತ್ಯ ಎಂದರು.
ಔಷಧ ವ್ಯಾಪಾರಿಗಳ ಸಂಘದ ಪದಾಧಿಕಾರಿಗಳಾದ ಸಚಿನ್ ಕುಡತಿನಿ, ಶಿವಣ್ಣ ತುರಕಾಣಿ, ಶಾಂತಯ್ಯ ಸರಗಣಾಚಾರಿ, ಮುತ್ತಣ್ಣ ಗೋತಗಿ, ಡಾ.ಶ್ಯಾಮೀದ್, ನಿಜಾಮ್ ಕಪಾಲಿ, ಪ್ರಕಾಶ ಪಾಟೀಲ್, ಶಾಂತೇಶ ಕಾಟಾಪುರಮಠ, ಗೋಪಾಲ ಆಚಾರ್, ವಾಗೀಶ, ವಿಶ್ವನಾಥ ನಾಗೂರು ಇತರರಿದ್ದರು.