ಟ್ಯಾಂಕರ್ ಹರಿದು ಕುರಿಗಾಹಿ ಹಾಗೂ 18 ಕುರಿಗಳ ಸಾವು

IMG-20220813-WA0024.jpg
Published on

ಕೊಪ್ಪಳ: ಕುಷ್ಟಗಿ ತಾಲೂಕಿನ ನಿಡಶೇಸಿ ಗ್ರಾಮದ ಬಳಿ ರಸ್ತೆಯಲ್ಲಿ ತೆರಳುತ್ತಿದ್ದ ಕುರಿಮಂದೆ ಮೇಲೆ ಟ್ಯಾಂಕರ್ ಹರಿದು ಓರ್ವ ಕುರಿಗಾಹಿ ಹಾಗೂ 18 ಕುರಿಗಳು ಸಾವಿಗೀಡಾದ ಘಟನೆ ಶನಿವಾರ ಬೆಳ್ಳಂಬೆಳಗ್ಗೆ ನಡೆದಿದೆ.


ಬೆಳಗಾವಿ ಜಿಲ್ಲೆ ಚಿಕ್ಕೋಡಿ ಮೂಲದ ಯಲ್ಲಪ್ಪ ಬಸಪ್ಪ ಚಿಗರಿ (45) ಮೃತ ದುರ್ದೈವಿ. ಬೆಳಗ್ಗೆ ಎಂದಿನಂತೆ ಕುರಿಮಂದೆಯೊಂದಿಗೆ ಕುಷ್ಟಗಿ-ಗಜೇಂದ್ರಗಡ ರಸ್ತೆಯಲ್ಲಿ ತೆರಳುತ್ತಿದ್ದ. ನಿಡಶೇಸಿ ಗ್ರಾಮ ಕೆರೆ ಹತ್ತಿರದಲ್ಲಿ ವೇಗವಾಗಿ ಬಂದ ಟ್ಯಾಂಕರ್ ನಿಯಂತ್ರಣ ತಪ್ಪಿ ಕುರಿ ಮಂದೆ ಮೇಲೆ ಹರಿದಿದೆ‌. ಡಿಕ್ಕಿ ಹೊಡೆದ ರಭಸಕ್ಕೆ ಯಲ್ಲಪ್ಪ ಹಾಗೂ 18 ಕುರಿಗಳು ಸ್ಥಳದಲ್ಲೇ ಸಾವೀಗೀಡಾಗಿವೆ.


ಸ್ಥಳದಲ್ಲಿದ್ದವರು ತಕ್ಷಣ ಯಲ್ಲಪ್ಪನನ್ನು ಆಸ್ಪತ್ರೆಗೆ ಸೇರಿಸುವ ಪ್ರಯತ್ನ ಮಾಡಿದರೂ ಫಲ ನೀಡಲಿಲ್ಲ. ಮನೆಯೊಡನೆಯನನ್ನು ಕಳೆದುಕೊಂಡ ಕುಟುಂಬದವರ ರೋಧನ ಮುಗಿಲು ಮುಟ್ಟಿತ್ತು. ಟ್ಯಾಂಕರ್ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಪ್ರರಣ ದಾಖಲಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net