

ಕುಷ್ಟಗಿ: ನಿಯಮಿತ ಯೋಗಾಭ್ಯಾಸದಿಂದ ಆರೋಗ್ಯಪೂರ್ಣ ಜೀವನ ನಡೆಸಲು ಸಾಧ್ಯವಾಗುತ್ತದೆ ಎಂದು ಪ್ರಗತಿಪರ ರೈತ ದೇವೇಂದ್ರಪ್ಪ ಬಳೂಟಗಿ ಹೇಳಿದರು.
ಅಂತಾರಾಷ್ಟ್ರೀಯ ಯೋಗ ದಿನಾಚರಣೆ ನಿಮಿತ್ತ ಪತಂಜಲಿ ಯೋಗ ಸಮಿತಿ ಹಾಗೂ ಇನ್ನರ್ ವೀಲ್ ಕ್ಲಬ್ ಸಹಯೋಗದಲ್ಲಿ ಪಟ್ಟಣದ ಬುತ್ತಿಬಸವೇಶ್ವರ ದೇವಸ್ಥಾನ ಆವರಣದಲ್ಲಿ ಆರಂಭಿಸಲಾಗಿರುವ ವಿಶೇಷ ಯೋಗ ಶಿಬಿರಕ್ಕೆ ಚಾಲನೆ ನಿಡಿ ಸೋಮವಾರ ಮಾತನಾಡಿದರು.
ಯೋಗ, ಧ್ಯಾನಗಳಿಂದ ಸಕಾರಾತ್ಮಕ ಆಲೋಚನೆಯೊಂದಿಗೆ ನೆಮ್ಮದಿ ಜೀವನ ನಡೆಸಲು ಸಾಧ್ಯವಾಗುತ್ತದೆ. ವಿಶೇಷ ಶಿಬಿರಗಳಲ್ಲಿ ಪಾಲ್ಗೊಂಡು ನಿತ್ಯ ಯೋಗಾಭ್ಯಾಸದಲ್ಲಿ ತೊಡಗಿಕೊಳ್ಳುವಂತೆ ಸಲಹೆ ನೀಡಿದರು.
ಪತಂಜಿಲಿ ಯೋಗ ಸಮಿತಿಯ ಜಿಲ್ಲಾ ಪ್ರಭಾರಿ ವೀರೇಶ ಬಂಗಾರಶೆಟ್ಟರ್ ಮಾತನಾಡಿ, ಯೋಗ ದಿನಾಚರಣೆ ನಮಿತ್ತ ವಿಶೇಷ ಶಿಬಿರ ಆಯೋಜಿಸಲಾಗಿದೆ. ಜೂ.21ರವರೆಗೆ ನಿತ್ಯ ನಡೆಯಲಿದೆ. ಸಾರ್ವಜನಿಕರು ಸದುಪಯೋಗ ಪಡೆಯಬೇಕಿದೆ ಎಂದರು.
ಯೋಗ ಶಿಕ್ಷಕರಾದ ನಾರಾಯಣ, ಅಚಲಾರಾಂ, ಪಂಕಜ್ ಹಾಗೂ ಲತಾ ಸ್ಥಾವರಮಠ ಶಿಬಿರ ನಡೆಸಿಕೊಟ್ಟರು. ಪ್ರಮುಖರಾದ ಗಣೇಶ ಗುಡ್ಡದ್, ಡಾ.ಪಿ.ಮಲ್ಲಪ್ಪ, ಶರಣಬಸವ ಮಾಟೂರು, ಶಿವಲೀಲಾ ದಾವಣಗೆರೆ, ಗಿರಿಜಮ್ಮ ಪಾಟೀಲ್, ಕುಸುಮಕ್ಕ ಇತರರು ಇದ್ದರು.