ವಾರ್ಡನ್ ಬದಲಾವಣೆ ಬೇಡ, ಎಸ್ಟಿ ಹಾಸ್ಟೆಲ್ ವಿದ್ಯಾರ್ಥಿಗಳ ಆಗ್ರಹ

Kushtagi Hostel Ladies Protest
ಕುಷ್ಟಗಿಯ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯದ ವಿದ್ಯಾರ್ಥಿಗಳು ವಾರ್ಡನ್ ಬದಲಾವಣೆ ವಿರೋಧಿಸಿ ಪಟ್ಟಣದ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಈರಪ್ಪ ಚಿತ್ರಾಳಗೆ ಗುರುವಾರ ಮನವಿ ಸಲ್ಲಿಸಿದರು.
Published on

ಕುಷ್ಟಗಿ: ವಾರ್ಡನ್ ಬದಲಾವಣೆ ವಿರೋಧಿಸಿ ಪಟ್ಟಣದ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯದ ವಿದ್ಯಾರ್ಥಿಗಳು ಗುರುವಾರ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿ ಇಲಾಖೆಯ ಸಹಾಯಕ ನಿರ್ದೇಶಕ ಈರಪ್ಪ ಚಿತ್ರಾಳಗೆ ಮನವಿ ಸಲ್ಲಿಸಿದರು.

ಇಲಾಖೆಯ ಕಚೇರಿ ಅಧೀಕ್ಷಕ ಗ್ಯಾನನಗೌಡಗೆ ವಸತಿ ನಿಲಯದ ಪ್ರಭಾರ ನೀಡಲಾಗಿತ್ತು. ಗ್ಯಾನನಗೌಡರ ನಿಯೋಜನೆ ರದ್ದುಪಡಿಸಿ ಕೆ.ಎಂ.ಸ್ವಪ್ನಾ ಎಂಬುವರನ್ನು ವಾರ್ಡನ್ ಆಗಿ ನೇಮಕ ಮಾಡಲಾಗಿದೆ. ನಮ್ಮ ಸಮಸ್ಯೆಗಳಿಗೆ ಸ್ಪಂದಿಸಿದ್ದ ಗ್ಯಾನನಗೌಡರನ್ನೇ ಮುಂದುವರಿಸುವಂತೆ ವಿದ್ಯಾರ್ಥಿಗಳು ಆಗ್ರಹಿಸಿದರು. ವಿದ್ಯಾರ್ಥಿಗಳ ಬೇಡಿಕೆಯನ್ನು ಇಲಾಖೆಯ ಉಪ ನಿರ್ದೇಶಕರ ಗಮನಕ್ಕೆ ತರುವುದಾಗಿ ಸಹಾಯಕ ನಿರ್ದೇಶಕ ಈರಪ್ಪ ಚಿತ್ರಾಳ ತಿಳಿಸಿದರು. ವಾಲ್ಮೀಕಿ ನಾಯಕ ಸಮುದಾಯದ ತಾಲೂಕು ಅಧ್ಯಕ್ಷ ಬಸವರಾಜ ನಾಯಕ್ ಹಾಗೂ ವಿದ್ಯಾರ್ಥಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net