ವೋಟರ್ ಐಡಿಗೆ ಆಧಾರ್ ಲಿಂಕ್ ಮಾಡುವಂತೆ ನರೇಗಾ ಯೋಜನೆಯ ಐಇಸಿ ಸಂಯೋಜಕ ಸಲಹೆ

240822 Bejakal Meeting on Voter aadhar Link
ಕುಷ್ಟಗಿ ತಾಲೂಕು ಬಿಜಕಲ್ ಗ್ರಾಮದಲ್ಲಿ ಮತದಾರರ ಗುರುತಿನ ಚೀಟಿಯ ಜತೆ ಆಧಾರ್ ಜೋಡಣೆ ಕುರಿತು ನರೇಗಾ ಯೋಜನೆಯ ಐಇಸಿ ಸಂಯೋಜಕ ದೇವರಾಜ ಪತ್ತಾರ ಮಾಹಿತಿ ನೀಡಿದರು.
Published on

ಕುಷ್ಟಗಿ: ಪ್ರತಿಯೊಬ್ಬ ಮತದಾರರು ಮತದಾರರ ಗುರುತಿನ ಚೀಟಿಗೆ ಆಧಾರ್ ಸಂಖ್ಯೆ ಜೋಡಣೆ ಮಾಡಬೇಕು ಎಂದು ನರೇಗಾ ಯೋಜನೆಯ ಐಇಸಿ ಸಂಯೋಜಕ ದೇವರಾಜ ಪತ್ತಾರ ಹೇಳಿದರು.

ತಾಲೂಕಿನ ಬಿಜಕಲ್ ಗ್ರಾಮದಲ್ಲಿ ಸಾರ್ವಜನಿಕರಿಗೆ ಬುಧವಾರ ಜಾಗೃತಿ ಮೂಡಿಸಿ ಮಾತನಾಡಿದರು. ಚುನಾವಣಾ ಆಯೋಗದ ಮಾರ್ಗಸೂಚಿಯಂತೆ ದೇಶದೆಲ್ಲೆಡೆ ಮತದಾರರ ಗುರುತಿನ ಚೀಟಿಗೆ ಆಧಾರ್ ಸಂಖ್ಯೆ ಜೋಡಣೆ ಮಾಡಲಾಗುತ್ತಿದೆ. ಮುಂಬರುವ ಚುನಾವಣೆಗಳನ್ನು ಪಾರದರ್ಶಕ ನಡೆಸಲು ಈ ರೀತಿ ಮಾಡಲಾಗುತ್ತಿದೆ. ಮೊಬೈಲ್‌ನಲ್ಲೇ ಜೋಡಣೆ ಮಾಡಲು ಅವಕಾಶ ಕಲ್ಪಿಸಲಾಗಿದೆ. ಬೂತ್ ಮಟ್ಟದ ಅಧಿಕಾರಿಗಳು ಮತದಾರರ ಮನೆಗೆ ಭೇಟಿ ನೀಡಿ ಮತದಾರರಿಗೆ ಮಾಹಿತಿ ನೀಡಬೇಕಿದೆ. ಕಾಯಕ ಮಿತ್ರರು ನರೇಗಾ ಕೂಲಿಕಾರರ ಆಧಾರ್ ಜೋಡಣೆ ಮಾಡಬೇಕು ಎಂದರು.

ಗ್ರಾಮದ 75 ಜನರ ಆಧಾರ್ ಜೋಡಣೆ ಮಾಡಲಾಯಿತು. ಗ್ರಾಪಂ ಪಿಡಿಒ ನಾಗೇಶ ಅರಳಿಗನೂರು, ಕರವಸೂಲಿಗಾರ ಹನುಮಂತಪ್ಪ ತಳವಾರ್, ಕಾಯಕ ಮಿತ್ರ ಸ್ವಾತಿ ಮಾಲಿಪಾಟೀಲ್, ಕಂದಾಯ ಇಲಾಖೆ ಸಿಬ್ಬಂದಿ ಶರಣಪ್ಪ ಪಿಡ್ಡಪ್ಪನವರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net