

ಕುಷ್ಟಗಿ: ಚುನಾವಣೆ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಕಟ್ಟೆಚ್ಚರ ವಹಿಸಿ ಎಂದು ಚುನಾವಣಾ ಬಂದೋಬಸ್ತ್ ಉಸ್ತುವಾರಿ ಶಶಿಧರಸ್ವಾಮಿ ಹೇಳಿದರು.
ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪೊಲೀಸರು ಹಾಗೂ ಗೃಹರಕ್ಷಕ ಸಿಬ್ಬಂದಿಗೆ ಕರ್ತವ್ಯ ಹಂಚಿಕೆ ಮಾಡಿ ಶುಕ್ರವಾರ ಮಾತನಾಡಿದರು. ಚುನಾವಣಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಮತದಾರರನ್ನು ಹೊರತುಪಡಿಸಿ ಅನಗತ್ಯ ಓಡಾಡುವವರಿಗೆ ಒಳ ಬರದಂತೆ ತಾಕೀತು ಮಾಡಬೇಕು. ಗಲಾಟೆ ನಡೆದಲ್ಲಿ ತಕ್ಷಣ ಮೇಲಧಿಕಾರಿಗಳ ಗಮನಕ್ಕೆ ತರಬೇಕು ಎಂದು ತಿಳಿಸಿದರು.
ಸಿಪಿಐ ಎನ್.ಆರ್.ನಿಂಗಪ್ಪ ಮಾತನಾಡಿ, ಮತದಾರರ ಮಧ್ಯೆ ಪರಸ್ಪರ ಅಂತರ ಕಾಯ್ದುಕೊಳ್ಳುವುದು ಕಡ್ಡಾಯವಾಗಿದೆ. ಪದೇ ಪದೆ ಮತಗಟ್ಟೆ ಪ್ರವೇಶಿಸದಂತೆ ಅಭ್ಯರ್ಥಿಗಳಿಗೆ ಮನವರಿಕೆ ಮಾಡಬೇಕು. ತಾಸಿಗೊಮ್ಮೆ ಬಂದುಹೋಗಲು ಅನುಮತಿ ನೀಡಬೇಕು. ಶಾಂತಿಯುತ ಮತದಾನಕ್ಕೆ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
367 ಪೊಲೀಸರ ನೇಮಕ: ಡಿವೈಎಸ್‌ಪಿ ಸೇರಿ ಮೂವರು ಸಿಪಿಐ, 8 ಪಿಎಸ್‌ಐ, 25 ಎಎಸ್‌ಐ, 59 ಹೆಡ್ ಕಾನ್ಸ್‌ಟೇಬಲ್, 132 ಕಾನ್ಸ್‌ಟೇಬಲ್, 143ಗೃಹ ರಕ್ಷಕ ಸಿಬ್ಬಂದಿಯನ್ನು ಗ್ರಾಪಂ ಚುನಾವಣೆ ಬಂದೋಬಸ್ತ್‌ಗೆ ನಿಯೋಜಿಸಲಾಗಿದೆ.