ತೃತೀಯ ಲಿಂಗಿಗಳಿಗೆ ನರೇಗಾದಡಿ ಕೆಲಸ: ತಾಪಂ ಇಒ ಶಿವಪ್ಪ ಸುಬೇದಾರ್ ಮಾಹಿತಿ

241122 K Boduru Tanda Third Gender Narega Work
ಕೆ.ಬೋದೂರು ತಾಂಡಾದಲ್ಲಿ ಲಿಂಗತ್ವ ಅಲ್ಪಸಂಖ್ಯಾತರಿಗೆ ತಾಪಂ ಇಒ ಶಿವಪ್ಪ ಸುಬೇದಾರ್ ನರೇಗಾ ಜಾಬ್‌ಕಾರ್ಡ್ ವಿತರಿಸಿದರು.
Published on

ಕುಷ್ಟಗಿ: ತೃತೀಯ ಲಿಂಗಿಗಳನ್ನು ಸಮಾಜದ ಮುಖ್ಯ ವಾಹಿನಿಗೆ ತರುವ ಹಾಗೂ ಗೌರವಯುತ ಜೀವನ ನಡೆಸಲು ಪೂರಕ ವಾತಾವರಣ ಕಲ್ಪಿಸಿಕೊಡುವ ಕಾರ್ಯವನ್ನು ಸರ್ಕಾರ ಮಾಡುತ್ತಿದೆ ಎಂದು ತಾಪಂ ಇಒ ಶಿವಪ್ಪ ಸುಬೇದಾರ್ ಹೇಳಿದರು.

ಬಿಜಕಲ್ ಗ್ರಾಪಂ ವ್ಯಾಪ್ತಿಯ ಕೆ.ಬೋದೂರು ತಾಂಡಾದಲ್ಲಿ ನೆಲೆಸಿರುವ ಲಿಂಗತ್ವ ಅಲ್ಪಸಂಖ್ಯಾತರಿಗೆ ನರೇಗಾ ಯೋಜನೆಯಡಿ ವಿಶೇಷ ವರ್ಗದ ಜಾಬ್‌ಕಾರ್ಡ್ ವಿತರಿಸಿ ಗುರುವಾರ ಮಾತನಾಡಿದರು. ತಾಲೂಕಿನಲ್ಲಿರುವ ಲಿಂಗತ್ವ ಅಲ್ಪ ಸಂಖ್ಯಾತರ ಸಮೀಕ್ಷೆ ನಡೆಸಿ ನರೇಗಾ ಯೋಜನೆಯಡಿ ಕೆಲಸ ನೀಡಲಾಗುತ್ತಿದೆ. ಆ ಮೂಲಕ ಸ್ವಾವಲಂಬಿಗಳನ್ನಾಗಿಸುವ ಪ್ರಯತ್ನ ಮಾಡಲಾಗುತ್ತಿದೆ. ಗಂಗಾವತಿ ತಾಲೂಕಿನ ಬಸಾಪಟ್ಟಣದ ಶರಣಮ್ಮ ನರೇಗಾ ಯೋಜನೆಯ ಸದುಪಯೋಗ ಪಡೆದು ಲಿಂಗತ್ವ ಅಲ್ಪಸಂಖ್ಯಾತರಿಗೆ ಮಾದರಿಯಾಗಿದ್ದಾರೆ ಎಂದರು.

ನರೇಗಾ ಸಹಾಯಕ ನಿರ್ದೇಶಕ ನಿಂಗನಗೌಡ ಹಿರೇಹಾಳ, ಐಇಸಿ ಸಂಯೋಜಕ ದೇವರಾಜ ಪತ್ತಾರ್, ತಾಂತ್ರಿಕ ಸಂಯೋಜಕ ಕೆ.ಬಸವರಾಜ, ಪಿಡಿಒ ನಾಗೇಶ ಅರಳಿಗನೂರು, ಸದಸ್ಯ ಯಮನಪ್ಪ ರಾಠೋಡ್, ಗ್ರಾಮ ಕಾಯಕ ಮಿತ್ರ ಸ್ವಾತಿ ಮಾಲಿಪಾಟೀಲ್, ಕಾಯಕ ಬಂಧು ಅಮರೇಶ ರಾಠೋಡ್ ಇತರರಿದ್ದರು. ತೃತೀಯ ಲಿಂಗಿಗಳಾದ ರಾಮಪ್ಪ ಚವ್ಹಾಣ್(ಕೌಸಲ್ಯ), ಯಲ್ಲಪ್ಪ ಯಮನಪ್ಪ(ಯಲ್ಲವ್ವ), ರಾಮಪ್ಪ ಹೊಸಕೇರಪ್ಪ (ರಾಮವ್ವ) ಹಾಗೂ ಮಂಜುನಾಥ ಗೌಡರ್(ಮಂಜವ್ವ)ಗೆ ನರೇಗಾ ಜಾಬ್‌ಕಾರ್ಡ್ ವಿತರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net