

ಕುಷ್ಟಗಿ: ಪಟ್ಟಣದ ಆರಾಧ್ಯ ದೈವ ಅಡವಿ ಮುಖ್ಯ ಪ್ರಾಣೇಶ(ಅಡವಿರಾಯ) ದೇವಸ್ಥಾನದ ಜಾತ್ರಾ ಮಹೋತ್ಸವ ನಿಮಿತ್ತ ಬುಧವಾರ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು.
ಮಂಗಳವಾರ ಬೆಳಗ್ಗೆ ಅಡವಿ ಮುಖ್ಯ ಪ್ರಾಣೇಶನ ಉತ್ಸವ ಮೂರ್ತಿಯನ್ನು ಅರ್ಚಕರ ಮನೆಯಿಂದ ದೇವಸ್ಥಾನವರೆಗೆ ಮೆರವಣಿಗೆ ಮೂಲಕ ಕರೆ ತರಲಾಯಿತು. ನಂತರ ವೇದಮಂತ್ರ ಪಠಣದೊಂದಿಗೆ ಕಂಕಣ ಬಂಧನ ಇನ್ನಿತರ ಕಾರ್ಯಕ್ರಮ ಜರುಗಿದವು. ಬುಧವಾರ ಬೆಳಗ್ಗೆ ವಾಯುಸ್ತುತಿ ಪುನಃಶ್ಚರಣ, ಮಧು ಅಭಿಷೇಕ, ವೇದ ಪಠಣ, ಪಲ್ಲಕ್ಕಿ ಉತ್ಸವದೊಂದಿಗೆ ಬಲಿಹರಣ, ಬೃಹತಿ ಸಹಸ್ರಯಾಗ, ತೊಟ್ಟಿಲು ಸೇವೆ ನಡೆಯಿತು. ಮೇ 12 ರಂದು ಮಹಾ ರಥೋತ್ಸವ ನಡೆಯಲಿದೆ. ಸ್ಥಳೀಯ ಬ್ರಾಹ್ಮಣ ಸಮುದಾಯದ ಅಧ್ಯಕ್ಷ ತಿಮ್ಮಪ್ಪಯ್ಯ ದೇಸಾಯಿ ಸೇರಿದಂತೆ ಸಮುದಾಯದ ನೂರಾರು ಜನ ಪಾಲ್ಗೊಂಡಿದ್ದರು.