ತೋಳ ದಾಳಿ, 12 ಜನರಿಗೆ ಗಾಯ

14032020 Kustagi Wolf attack
Published on

ಮೂವರಿಗೆ ಹುಬ್ಬಳ್ಳಿಯಲ್ಲಿ ಚಿಕಿತ್ಸೆ | ತಡರಾತ್ರಿ ನಿದ್ದೆಯಿಂದೆದ್ದ ಗ್ರಾಮಸ್ಥರು

ಕುಷ್ಟಗಿ: ತಾಲೂಕಿನ ಟೆಂಗುಂಟಿ ಹಾಗೂ ಹೊಸೂರು ಗ್ರಾಮದಲ್ಲಿ ಮನೆ ಹೊರಗೆ ಮಲಗಿದ್ದವರ ಮೇಲೆ ತೋಳವೊಂದು ದಾಳಿ ನಡೆಸಿ ಇಬ್ಬರು ಮಹಿಳೆಯರು ಸೇರಿ 12 ಜನ ಶುಕ್ರವಾರ ತಡರಾತ್ರಿ ಗಾಯಗೊಂಡಿದ್ದಾರೆ.

ಟೆಂಗುಂಟಿ ಗ್ರಾಮದಲ್ಲಿ ಗ್ಯಾನಪ್ಪ ಮಾದರ್, ಭರಮಪ್ಪ ಮಾದರ್, ಬಸಪ್ಪ ಮಾದರ್, ರಾಜಪ್ಪ ಮಾದರ್, ಯಮನಮ್ಮ ಜೈನರ್, ಅಂದನಗೌಡ ಜೈನರ್ ಹಾಗೂ ದೊಡ್ಡಪ್ಪ ಹಡಪದರ್ ಮೇಲೆ ದಾಳಿ ನಡೆಸಿ ಮುಖ, ಕೈ ಕಾಲುಗಳನ್ನು ಕಚ್ಚಿದೆ. ಗಾಯಾಳುಗಳು ಚೀರಾಡುತ್ತಿದ್ದಂತೆ ಹೊಸೂರು ಗ್ರಾಮದತ್ತ ಓಡಿದ ತೋಳ, ಅಲ್ಲೂ ಬಸಪ್ಪ ಮಡಿವಾಳರ್, ನಾಗಮ್ಮ ಹೊಸೂರು ಹಾಗೂ ನಾಗಪ್ಪ ಬೀರಲದಿನ್ನಿಗೆ ಕಚ್ಚಿದೆ. ಘಟನೆಯಿಂದ ಆತಂಕಗೊಂಡ ಗ್ರಾಮಸ್ಥರು ತೋಳವನ್ನು ಸಾಯಿಸಿದ್ದಾರೆ. ಗಾಯಾಳುಗಳಿಗೆ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು, ಗಂಭೀರ ಗಾಯಗೊಂಡ ಮೂವರನ್ನು ಹುಬ್ಬಳ್ಳಿ ಆಸ್ಪತ್ರೆಗೆ ಕಳುಹಿಸಿಕೊಡಲಾಗಿದೆ.

ಗಾಯಾಳುಗಳ ದೂರು ಆಧರಿಸಿ ಪರಿಹಾರ ಒದಗಿಸುವಂತೆ ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು. ಸತ್ತ ತೋಳವನ್ನು ವಶಪಡಿಸಿಕೊಂಡು ಮುಂದಿನ ಪ್ರಕ್ರಿಯೆ ನಡೆಸಲಾಗುವುದು.| ಶಿವಶಂಕರ ರ‌್ಯಾವಣಕಿ ವಲಯ ಅರಣ್ಯಾಧಿಕಾರಿ ಕುಷ್ಟಗಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net