ಕನ್ನಡ ತ್ರಿಪದಿ ಸಾಹಿತ್ಯದ ಪ್ರಮುಖ ಕವಿ ಸರ್ವಜ್ಞ

Untitled design(16)
Published on

ಕುಷ್ಟಗಿ: ಪಟ್ಟಣ ಸೇರಿ ತಾಲೂಕಿನ ವಿವಿಧೆಡೆ ಕವಿ ಸರ್ವಜ್ಞನ ಜಯಂತಿ ಆಚರಿಸಲಾಯಿತು.

ಪಟ್ಟಣದ ತಹಸಿಲ್ ಕಚೇರಿಯಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮವನ್ನು ತಹಸೀಲ್ದಾರ್ ಅಶೋಕ ಶಿಗ್ಗಾವಿ ಉದ್ಘಾಟಿಸಿ ಮಾತನಾಡಿ, ಸರ್ವಜ್ಞ ಕನ್ನಡ ತ್ರಿಪದಿ ಸಾಹಿತ್ಯದ ಪ್ರಮುಖ ಕವಿಯಾಗಿದ್ದಾರೆ. ಸರ್ವಜ್ಞ ಎಲ್ಲ ವಿಚಾರಗಳ ಕುರಿತಾಗಿ ಸಾಹಿತ್ಯ ರಚಿಸಿರುವುದರಿಂದ ಆತನನ್ನು ಎಲ್ಲವನ್ನೂ ತಿಳಿದಾತ ಎಂದು ಕರೆಯಲಾಗುತ್ತದೆ. ಸರ್ವಜ್ಞನ ತ್ರಿಪದಿಗಳು ಒಂದು ಜಾತಿಗೆ ಸೀಮಿತವಾಗದೆ ಇಡೀ ಮಾನವ ಕುಲಕ್ಕೆ ಸಂಬಂಧಿಸಿದವುಗಳಾಗಿವೆ. ಅವುಗಳು ಎಲ್ಲ ಕಾಲಕ್ಕೂ ಪ್ರಸ್ತುತವಾಗಿವೆ ಎಂದರು.

ಕುಂಬಾರ ಸಮುದಾಯದ ತಾಲೂಕಾಧ್ಯಕ್ಷ ರಾಮಣ್ಣ ಕುಂಬಾರ, ಪ್ರಮುಖರಾದ ಸುವರ್ಣ ಕುಂಬಾರ, ಶಶಿಧರ ಕುಂಬಾರ, ಕಾರ್ಯದರ್ಶಿ ಸಂಗಮೇಶ ಕುಂಬಾರ, ನಾಗಪ್ಪ ಕುಂಬಾರ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net