ತಹಸಿಲ್ ಕಚೇರಿಯಲ್ಲಿ ಕೇಸ್ ವರ್ಕರ್, ಪರಿಚಾರಕರು ಹಣ ಪಡೆಯುತ್ತಿರುವ ವಿಡಿಯೋ ವೈರಲ್

15122020 Lingasugur Video Viral Servers Money
Published on

ಕುಷ್ಟಗಿ: ಪಟ್ಟಣದ ತಹಸಿಲ್ ಕಚೇರಿಯಲ್ಲಿ ದುಡ್ಡು ಕೊಟ್ರೆ ಕೆಲಸ ಆಗುತ್ತೆ ಎನ್ನುವ ಮಾತಿಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋ ಪುಷ್ಟಿ ನೀಡಿದೆ.

ಒಬ್ಬ ಕೇಸ್ ವರ್ಕರ್, ಇಬ್ಬರು ಪರಿಚಾರಕರು ಸಾರ್ವಜನಿಕರಿಂದ ಹಣ ಪಡೆಯುತ್ತಿರುವ ವಿಡಿಯೋ ವೈರಲ್ ಆಗಿದೆ. ಹಣ ನೀಡಿದರೆ ಕೆಲಸ. ಇಲ್ಲದಿದ್ದರೆ ವಿಳಂಬ ಎಂಬುದು ಇಲ್ಲಿನ ಸ್ಥಿತಿ. ಅಧಿಕಾರಿ ಮತ್ತು ಸಿಬ್ಬಂದಿ ವರ್ತನೆಗೆ ಬೇಸತ್ತ ಕೆಲವರು ಸಾರ್ವಜನಿಕರಿಂದ ಹಣ ಪಡೆಯುತ್ತಿರುವ ದೃಶ್ಯವನ್ನು ಸೆರೆ ಹಿಡಿದು, ಸಾಮಾಜಿಕ ಜಾಲತಾಣಗಳಿಗೆ ಹರಿಬಿಟ್ಟಿದ್ದಾರೆ.

ಇಲಾಖೆಯ ಸಿಬ್ದಂದಿ ಸಾರ್ವಜನಿಕರಿಂದ ಹಣ ಪಡೆಯುತ್ತಿರುವ ವಿಡಿಯೋ ಗಮನಿಸಿದ್ದೇನೆ. ಈ ಸಂಬಂಧ ತಹಸಿಲ್ ಕಚೇರಿಯ ಕೇಸ್ ವರ್ಕರ್ ಸುನಿತಾ, ಪರಿಚಾರಕರಾದ ಅನಿಲ್ ಹಾಗೂ ಲಕ್ಷ್ಮಿ ವಿರುದ್ಧ ಶಿಸ್ತು ಕ್ರಮಕ್ಕೆ ಶಿಫಾರಸು ಮಾಡಿ ಮೇಲಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. | ಎಂ.ಸಿದ್ದೇಶ ಕುಷ್ಟಗಿ ತಹಸೀಲ್ದಾರ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net