ಶ್ರೀಗಳ ಚೇತರಿಕೆಗೆ ಮಹಾರುದ್ರಾಭಿಷೇಕ

05092020 Kustagi Maharudrabhishek
Published on

ಕುಷ್ಟಗಿ: ಬಾಳೆಹೊನ್ನೂರಿನ ಶ್ರೀಮದ್ ರಂಭಾಪುರಿ ಜಗದ್ಗುರುಗಳು ಕರೊನಾದಿಂದ ಚೇತರಿಸಿಕೊಳ್ಳಲೆಂದು ಪಟ್ಟಣದ ಮದ್ದಾನೇಶ್ವರ ಮಠದಲ್ಲಿ ಶನಿವಾರ ಮಹಾರುದ್ರಾಭಿಷೇಕ ನೆರವೇರಿಸಲಾಯಿತು.

ಶ್ರೀಮಠದ ಶ್ರೀ ಕರಿಬಸವ ಶಿವಾಚಾರ್ಯರು ಮಾತನಾಡಿ, ಕರೊನಾ ಜನರ ಜೀವನವನ್ನೇ ದುಸ್ತರವನ್ನಾಗಿಸಿದೆ. ಜಗದ್ಗುರು ಡಾ.ವೀರಸೋಮೇಶ್ವರ ಶಿವಾಚಾರ್ಯರಿಗೆ ಸೋಂಕು ದೃಢಪಟ್ಟಿರುವುದು ಭಕ್ತ ಸಮೂಹದಲ್ಲಿ ಆತಂಕವನ್ನುಂಟು ಮಾಡಿದೆ. ಶ್ರೀಗಳು ಶೀಘ್ರ ಗುಣಮುಖರಾಗಲಿ ಮಹಾರುದ್ರಾಭಿಷೇಕ ನೆರವೇರಿಸಲಾಗಿದೆ ಎಂದರು.ಕಾಶಿನಾಥ ಹಿರೇಮಠ, ಗುರುಸಿದ್ದಯ್ಯ ಹಿರೇಮಠ, ಮಹೇಶಸ್ವಾಮಿ, ಶೇಖರಪ್ಪ ಓತಗೇರಿ, ವೀರಯ್ಯ ಬಳ್ಳಾರಿಮಠ ಸೇರಿ ಭಕ್ತರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net