ಕರ್ಮಗಳನ್ನು ವಾಯುದೇವರಿಗೆ ಮುಟ್ಟಿಸಿ

Untitled design (29)
Published on

ಕುಷ್ಟಗಿ: ಭಗವಂತನು ಭೂಲೋಕಕ್ಕೆ ಮಾತ್ರ ಸೀಮಿತವಾಗದೆ ಜಲ, ಧರ, ಆಗಸಕ್ಕೆ ವ್ಯಾಪಿಸಿದೆ ಎಂದು ಉಡುಪಿಯ ಪಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥರು ಹೇಳಿದರು.

ಪಟ್ಟಣದ ಅಡವಿ ಮುಖ್ಯ ಪ್ರಾಣೇಶ ದೇವಸ್ಥಾನದಲ್ಲಿ ಹಮ್ಮಿಕೊಂಡಿರುವ ರಾಘವೇಂದ್ರ ಸಪ್ತಾಹ ಮಹೋತ್ಸವದ 6ನೇ ದಿನ ಬುಧವಾರ ಅನುಗ್ರಹ ಸಂದೇಶ ನೀಡಿದರು.

ಶರೀರ ಸೃಷ್ಟಿ ಮಾಡುವ ಭಗವಂತ ಯೋಗದ ಜತೆಗೆ ಕ್ಷೇಮವನ್ನೂ ನೋಡುತ್ತಾನೆ. ನಾವು ಕೊಡುವ ಕಲ್ಮಶಗಳೆಲ್ಲವನ್ನೂ ಶುದ್ಧೀಕರಿಸಿ ಅದಕ್ಕೆ ಮತ್ತೊಂದಿಷ್ಟು ಸೇರಿಸಿ ಕೊಡುತ್ತಾನೆ. ಕರ್ಮಗಳನ್ನು ವಾಯುದೇವರ ಮೂಲಕ ದೇವರಿಗೆ ಮುಟ್ಟಿಸಬೇಕು. ಕರೆದಲ್ಲಿಗೆ ಬರುವ ರಾಯರು ನಮ್ಮನ್ನು ವಾಯುದೇವರತ್ತ ಕರೆದುಕೊಂಡು ಹೋಗುತ್ತಾನೆ ಎಂದರು.

ವಿದ್ಯಾರಾಜೇಶ್ವರ ತೀರ್ಥರು ಮಹಾಭಾರತದ ಕೆಲ ಅಧ್ಯಾಯಗಳ ಕುರಿತು ಸಂದೇಶ ನೀಡಿದರು. ಸ್ಥಳೀಯ ಬ್ರಾಹ್ಮಣ ಸಮುದಾಯದ ಅಧ್ಯಕ್ಷ ತಿಮ್ಮಪ್ಪಯ್ಯ ದೇಸಾಯಿ, ದೇವಸ್ಥಾನದ ಪ್ರಧಾನ ಅರ್ಚಕ ಮಧ್ವಾಚಾರ ಪೂಜಾರ, ಪ್ರಮುಖರಾದ ಜಯತೀರ್ಥ ಸೌದಿ, ರಾಜಣ್ಣ ತಿಕೋಟಿಕರ್, ಅಡವಿರಾವ್ ಟಕ್ಕಳಕಿ, ಕೃಷ್ಣ ಆಶ್ರೀತ್ ಸೇರಿ ಬ್ರಾಹ್ಮಣ ಸಮುದಾಯದ ನೂರಾರು ಜನ ಪಾಲ್ಗೊಂಡಿದ್ದರು. ವಿವಿಧ ಕಲಾವಿದರಿಂದ ಸುಗಮ ಸಂಗೀತ, ಭಜನೆ ಇನ್ನಿತರ ಕಾರ್ಯಕ್ರವ ಜರುಗಿದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net