ಬಡವರಿಗೆ ಉಚಿತ ಹಾಲು ಉಚಿತ ವಿತರಣೆಗೆ ಶಾಸಕ ಚಾಲನೆ

03042020 Kustagi Free Milk Distribute
Published on

ಕುಷ್ಟಗಿ: ಪಟ್ಟಣದಲ್ಲಿರುವ ಸ್ಲಮ್ ನಿವಾಸಿಗಳು ಹಾಗೂ ಬಡ ಕುಟುಂಬಗಳಿಗೆ ನಂದಿನಿ ಹಾಲನ್ನು ಉಚಿತವಾಗಿ ವಿತರಿಸುವ ಕಾರ್ಯಕ್ರಮಕ್ಕೆ ಶಾಸಕ ಅಮರೇಗೌಡ ಪಾಟೀಲ್ ಬಯ್ಯಪುರ ಶುಕ್ರವಾರ ಚಾಲನೆ ನೀಡಿದರು.

ನಂತರ ಮಾತನಾಡಿ, ಪಟ್ಟಣದಲ್ಲಿ ಒಟ್ಟು 520ಪ್ಯಾಕೆಟ್ ಹಾಲು ವಿತರಿಸಲಾಗುತ್ತಿದೆ. 3 ಸ್ಲಮ್‌ಗಳ 490ಮನೆಗಳು ಹಾಗೂ ವಸತಿ ನಿಲಯದಲ್ಲಿ ಆಶ್ರಯ ಪಡೆದಿರುವ ಹೊರ ರಾಜ್ಯಗಳ ಕುಟುಂಬಗಳಿಗೆ 30ಪ್ಯಾಕೇಟ್ ವಿತರಿಸಲಾಗುತ್ತಿದೆ ಎಂದರು.

ಆಜ್ಞೆ ಪಾಲಿಸಲೇಬೇಕು: ಲಾಕ್‌ಡೌನ್ ನಿಯಮವನ್ನು ಉಲ್ಲಂಘಿಸುತ್ತಿರುವ ಪ್ರಕರಣಗಳಿಗೆ ಮುಖ್ಯಮಂತ್ರಿಗಳೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ವಿಚಾರದಲ್ಲಿ ಜನರು ಸರ್ಕಾರದ ಆಜ್ಞೆಯನ್ನು ಕಟ್ಟುನಿಟ್ಟಾಗಿ ಪಾಲಿಸಲೇಬೇಕಿದೆ. ಇಲ್ಲವಾದಲ್ಲಿ ಸ್ವಯಂಕೃತ ಅಪರಾಧವಾಗುತ್ತದೆ. ಸೋಂಕಿತರ ಸಂಖ್ಯೆ ಕಡಿಮೆಯಾದಲ್ಲಿ ಮಾತ್ರ ಲಾಕ್ ಡೌನ್ ಅಂತ್ಯವಾಗುತ್ತದೆ. ಸಂಖ್ಯೆ ಹೆಚ್ಚಾದಲ್ಲಿ ವಿಸ್ತರಿಸುವ ಸಾಧ್ಯತೆ ಇದೆ. ಜನ ಎಚ್ಚೆತ್ತುಕೊಳ್ಳಬೇಕಿದೆ ಎಂದು ಬಯ್ಯಪುರ ತಿಳಿಸಿದರು. ಪುರಸಭೆ ಮುಖ್ಯಾಧಿಕಾರಿ ಅಶೋಕ ಪಾಟೀಲ್, ಕೆಎಂಎಫ್ ಸಿಬ್ಬಂದಿ ಬಸವರಾಜ ಯರದೊಡ್ಡಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net