ಸಿಡಿಲಿಗೆ ರೈತ, ಎರಡು ಎಮ್ಮೆ ಬಲಿ

PARARIHARA VITARANE
ಕುಷ್ಟಗಿ ತಾಲೂಕು ಜೂಲಕಟ್ಟಿ ಬಳಿ ಸಿಡಿಲಿಗೆ ಬಲಿಯಾದ ಕೊರಡಕೇರಾ ಗ್ರಾಮದ ಅಮೋಘಸಿದ್ದಯ್ಯ ಗುರುವಿನ್ ಕುಟುಂಬಕ್ಕೆ ತಹಸೀಲ್ದಾರ್ ರವಿ ಅಂಗಡಿ ಪರಿಹಾರ ಚೆಕ್ ವಿತರಿಸಿದರು. ಕಂದಾಯ ನಿರೀಕ್ಷಕ ಶರಣಯ್ಯ ನಿಡಗುಂದಿಮಠ ಇತರರು ಇದ್ದರು.
Published on

ಕುಷ್ಟಗಿ: ಸಿಡಿಲಿಗೆ ತಾಲೂಕಿನ ಕೊರಡಕೇರಾ ಗ್ರಾಮದ ರೈತ ಅಮೋಘ ಸಿದ್ದಯ್ಯ ಶಿವಲಿಂಗಯ್ಯ ಗುರುವಿನ್ (32) ಗುರುವಾರ ಸಂಜೆ ಬಲಿಯಾಗಿದ್ದಾರೆ. ತಾಲೂಕಿನ ಜೂಲಕಟ್ಟಿ ಗ್ರಾಮದ ಹೊರವಲಯದ ಜಮೀನಿನಲ್ಲಿ ಕೂಲಿ ಕೆಲಸ ಮುಗಿಸಿಕೊಂಡು ಹಿಂತಿರುಗುವಾಗ ಮಳೆಗಾಳಿ ಶುರುವಾಗಿದೆ.

ಮಳೆಯಿಂದ ರಕ್ಷಿಸಿಕೊಳ್ಳಲು ಮರದ ಕೆಳಗೆ ನಿಂತಾಗ ಸಿಡಿಲು ಬಡಿದಿದೆ. ಸಂಜೆ ಮೃತನ ಮನೆಗೆ ತೆರಳಿ ತಹಸೀಲ್ದಾರ್ ರವಿ ಅಂಗಡಿ ಕುಟುಂಬಸ್ಥರಿಗೆ ಪರಿಹಾರ ಚೆಕ್ ವಿತರಿಸಿದರು. ಕಂದಾಯ ನಿರೀಕ್ಷಕ ಶರಣಯ್ಯ ನಿಡಗುಂದಿಮಠ ಇತರರು ಇದ್ದರು. ಇದಲ್ಲದೆ ತಾಲೂಕಿನ ಬಳೂಟಗಿ ಗ್ರಾಮದಲ್ಲಿ ಮರ್ತುಜಾಸಾಬ್ ಖಾಸಿಂಸಾಬ್ ಎನ್ನುವವರ ಎರಡು ಎಮ್ಮೆಗಳು ಸಿಡಿಲಿಗೆ ಸತ್ತಿವೆ.

ಗಂಗಾವತಿಯಲ್ಲಿ ಸಾಧಾರಣ ಮಳೆ

ಗಂಗಾವತಿ: ನಗರ ಸೇರಿದಂತೆ ತಾಲೂಕಿನಾದ್ಯಂತ ಗುರುವಾರ ಸಂಜೆ ಗುಡುಗು, ಸಿಡಿಲು, ಗಾಳಿ ಸಹಿತ ಸಾಧಾರಣ ಮಳೆಯಾಗಿದೆ. ಮಧ್ಯಾಹ್ನದಿಂದಲೇ ಮೋಡಕವಿತ ವಾತಾವರಣ ನಿರ್ಮಾಣವಾಗಿತ್ತು. ಸಂಜೆ ಆರು ಗಂಟೆಗೆ ಆರಂಭವಾದ ಮಳೆ, ಐದು ನಿಮಿಷಗಳ ಕಾಲ ಸುರಿದು ಅಲ್ಪಮಟ್ಟಿಗೆ ಇಳೆ ತಂಪಾಗಿಸಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net