ಶತ ಚಂಡಿ ಮಹಾಯಜ್ಞ ಸಂಪನ್ನ

051022 Kushtagi Yagna Shobhayatre
ಕುಷ್ಟಗಿಯಲ್ಲಿ ಶತ ಚಂಡಿ ಮಹಾಯಜ್ಞ ನಿಮಿತ್ತ ಮಂಗಳವಾರ ನಡೆದ ಶೋಭಾಯಾತ್ರೆಯಲ್ಲಿ ಮಹಿಳೆಯರು ಪಾಲ್ಗೊಂಡಿದ್ದರು.
Published on

ಕುಷ್ಟಗಿ: ಪಟ್ಟಣ ಸೇರಿದಂತೆ ತಾಲೂಕಿನ ವಿವಿಧೆಡೆ ವಿಜಯದಶಮಿ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಶರನ್ನವರಾತ್ರಿ ನಿಮಿತ್ತ ಪಟ್ಟಣದ ದುರ್ಗಾ ಪರಮೇಶ್ವರಿ ದೇವಸ್ಥಾನ ಆವರಣದಲ್ಲಿ ಸೆ.26ರಿಂದ ಆರಂಭಗೊಂಡಿದ್ದ ಶತ ಚಂಡಿ ಮಹಾಯಜ್ಞ ಮಂಗಳವಾರ ಸಂಪನ್ನಗೊಂಡಿತು. ಯಜ್ಞ ನಂತರ ದೇವಸ್ಥಾನದಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಶೋಭಾಯಾತ್ರೆ ನಡೆಯಿತು. ಅಮರನಾಥೇಶ್ವರ ಮಹದೇವಮಠದ ನಾಗಾಸಾಧು ಮಹಂತ ಸಹದೇವಾನಂದ ಗುರುಜೀ ಸೇರಿ ವಿವಿಧ ನಾಗಾಸಾಧು ಹಾಗೂ ಸ್ವಾಮೀಜಿಗಳನ್ನು ತೆರೆದ ವಾಹನದಲ್ಲಿ ಮೆರವಣಿಗೆ ಮೂಲಕ ಕರೆತರಲಾಯಿತು. ವಿವಿಧ ವಾದ್ಯ ವೃಂದದೊಂದಿಗೆ ನಡೆದ ಶೋಭಾಯಾತ್ರೆಯಲ್ಲಿ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ್, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಕೆ. ಮಹೇಶ್, ಯುವ ಮೋರ್ಚಾ ಅಧ್ಯಕ್ಷ ಉಮೇಶ್ ಯಾದವ್ ಸೇರಿದಂತೆ ನೂರಾರು ಜನ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net