ಕುಷ್ಟಗಿ ಸೀಲ್ ಡೌನ್ ಮಾಡುವಂತೆ ತಹಸೀಲ್ದಾರ್‌ಗೆ ಮನವಿ- ಪುರಸಭೆ ಅಧ್ಯಕ್ಷ ಜಿ.ಕೆ.ಹಿರೇಮಠ ಹೇಳಿಕೆ

Kushtagi Water Tank Opening
ಕುಷ್ಟಗಿಯ ಬಿ.ಸಿ.ಮಲ್ಲಯ್ಯ ಲೇಔಟ್‌ನಲ್ಲಿ ಕುಡಿವ ನೀರಿನ ಯೋಜನೆಗೆ ಪುರಸಭೆ ಅಧ್ಯಕ್ಷ ಜಿ.ಕೆ.ಹಿರೇಮಠ ಚಾಲನೆ ನೀಡಿದರು.
Published on

ಕುಷ್ಟಗಿ: ಪಟ್ಟಣವನ್ನು ಸೀಲ್ ಡೌನ್ ಮಾಡುವಂತೆ ತಹಸೀಲ್ದಾರ್‌ಗೆ ಮನವಿ ಸಲ್ಲಿಸಲಾಗಿದೆ ಎಂದು ಪುರಸಭೆ ಅಧ್ಯಕ್ಷ ಜಿ.ಕೆ.ಹಿರೇಮಠ ಹೇಳಿದರು. ಬಿ.ಸಿ.ಮಲ್ಲಯ್ಯ ಲೇಔಟ್‌ನಲ್ಲಿ ಬೋರ್‌ವೆಲ್ ಹಾಗೂ ನೀರಿನ ತೊಟ್ಟಿ ಉದ್ಘಾಟಿಸಿ ಮಂಗಳವಾರ ಮಾತನಾಡಿದರು. ಪಟ್ಟಣದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ದಿನೇ ದಿನೆ ಹೆಚ್ಚುತ್ತಿದೆ. ಸೋಮವಾರ ಒಂದೇ ದಿನ 24 ಜನರಿಗೆ ಸೋಂಕು ದೃಢಪಟ್ಟಿದೆ. ಹೀಗಾಗಿ ಪಟ್ಟಣವನ್ನು ಸೀಲ್‌ಡೌನ್ ಮಾಡಬೇಕಿದೆ. ಈ ಮೂಲಕ ಸೋಂಕು ನಿಯಂತ್ರಣಕ್ಕೆ ಬರಲಿದೆ. ವಾರ್ಡ್ ಸದಸ್ಯೆ ವಿಜಯಲಕ್ಷ್ಮೀ ಕಟ್ಟಿಮನಿ, ಪ್ರಮುಖರಾದ ತಾಜುದ್ದೀನ್ ದಳಪತಿ, ಖಾಜಾ ಹುಸೇನ್ ನೆರೆಬೆಂಚಿ, ಹನುಮೇಶ ಮೇಸ್ತ್ರಿ, ಮಂಜುನಾಥ ಕಟ್ಟಿಮನಿ, ಸಂಗಪ್ಪ ಶಿರಗುಂಪಿ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net