

ಕುಷ್ಟಗಿ: ಪಟ್ಟಣದ ತಹಸಿಲ್ ಕಚೇರಿ ರಸ್ತೆಯಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಪಡಿತರ ಅಕ್ಕಿಯ ಚೀಲಗಳನ್ನು ಕಂದಾಯ ಅಧಿಕಾರಿಗಳು ಇತ್ತೀಚೆಗೆ ಜಪ್ತಿ ಮಾಡಿಕೊಂಡಿದ್ದಾರೆ. ಅನುಮಾನಾಸ್ಪದವಾಗಿ ಹೊರಟಿದ್ದ ಗೂಡ್ಸ್ ವಾಹನ ಬೆನ್ನಟ್ಟಿ ತಡೆದಾಗ ಅನ್ನಭಾಗ್ಯ ಯೋಜನೆ ಅಕ್ಕಿ ಚೀಲಗಳು ಪತ್ತೆಯಾದವು.
ಇದನ್ನೂ ಓದಿ: ಗೋದಾಮಿನಿಂದ ಪಡಿತರ ಕಳವು
ಅಕ್ಕಿ ಸಮೇತ ವಾಹನವನ್ನು ಪೊಲೀಸರ ವಶಕ್ಕೆ ನೀಡಲಾಗಿದೆ. ಒಟ್ಟು 60 ಪ್ಲಾಸ್ಟಿಕ್ ಚೀಲಗಳಲ್ಲಿ 21 ಕ್ವಿಂಟಾಲ್ ಅಕ್ಕಿಯನ್ನು ಸಾಗಣೆ ಮಾಡಲಾಗುತ್ತಿತ್ತು. ಈ ಸಂಬಂಧ ಪಟ್ಟಣ ಠಾಣೆಗೆ ದೂರು ನೀಡಲಾಗಿ ಎಂದು ಆಹಾರ ನಿರೀಕ್ಷಕ ರಮೇಶ ತಾಳಕೇರಿ ತಿಳಿಸಿದ್ದಾರೆ.