

ಕುಷ್ಟಗಿ: ದೇಶದ ಪ್ರತಿಯೊಬ್ಬರ ಮನದಲ್ಲಿ ಶ್ರೀರಾಮ ನೆಲಸಿದ್ದಾನೆ. ರಾಮನ ಮಂದಿರ ನಿರ್ಮಾಣ ದೇಶವಾಸಿಗಳ ಹೆಮ್ಮೆಯ ವಿಚಾರವಾಗಿದೆ ಎಂದು ಪಟ್ಟಣದ ಮದ್ದಾನೇಶ್ವರ ಮಠದ ಶ್ರೀ ಕರಿಬಸವ ಶಿವಾಚಾರ್ಯ ಹೇಳಿದರು.
ಶ್ರೀರಾಮ ಮಂದಿರ ನಿರ್ಮಾಣಕ್ಕಾಗಿ ನಿಧಿ ಸಂಗ್ರಹ ಅಭಿಯಾನಕ್ಕೆ ಶುಕ್ರವಾರ ಚಾಲನೆ ನೀಡಿ ಮಾತನಾಡಿದರು. ಮಂದಿರ ನಿರ್ಮಾಣಕ್ಕೆ ಪ್ರತಿಯೊಬ್ಬರು ಕೈಜೋಡಿಸಬೇಕಿದೆ ಎಂದರು. ಕುರಿ ಮತ್ತು ಉಣ್ಣೆ ನಿಗಮದ ಅಧ್ಯಕ್ಷ ಶರಣು ತಳ್ಳಿಕೇರಿ ಮಾತನಾಡಿ, ರಾಮ ಮಂದಿರ ನಿರ್ಮಾಣ ಕಾರ್ಯ ಐತಿಹಾಸಿಕ ಮೈಲುಗಲ್ಲಾಗಲಿದೆ ಎಂದರು. ಬಿಜೆಪಿ ಜಿಲ್ಲಾಧ್ಯಕ್ಷ ದೊಡ್ಡನಗೌಡ ಪಾಟೀಲ್, ತಾಲೂಕು ಅಧ್ಯಕ್ಷ ಬಸವರಾಜ ಹಳ್ಳೂರು, ಮಾಜಿ ಶಾಸಕ ಕೆ.ಶರಣಪ್ಪ, ಪ್ರಮುಖರಾದ ಚನ್ನಪ್ಪ ನಾಲಗಾರ ಚಂದ್ರಕಾಂತ ವಡಗೇರಿ, ನರಸಿಂಹ ಕಾರಟಗಿ ಇತರರು ಇದ್ದರು.