ಕುಷ್ಟಗಿಯಲ್ಲಿ ಹಿಂದು-ಮುಸ್ಲಿಮರಿಂದ ಗಣಪತಿ ಮೂರ್ತಿ ಪ್ರತಿಷ್ಠಾಪನೆ

010922 Kushtagi Hindhu muslim Ganesha Idiol
Published on

ಕುಷ್ಟಗಿ: ಪಟ್ಟಣ ಸೇರಿದಂತೆ ತಾಲೂಕಿನ ವಿವಿಧೆಡೆ ಗೌರಿ ಗಣೇಶ ಹಬ್ಬದ ಸಂಭ್ರಮ ಕಂಡುಬಂತು. ಮನೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ ಭಕ್ತರು ವಿಶೇಷ ಪೂಜೆ ಸಲ್ಲಿಸಿದರು.

ಪಟ್ಟಣದ ಹಳೇ ಬಜಾರ್ ರಸ್ತೆಯಲ್ಲಿ 40 ವರ್ಷಗಳಿಂದ ಹಿಂದು ಮುಸ್ಲಿಮರು ಸೇರಿಕೊಂಡು ಗಣೇಶ ಮೂರ್ತಿ ಕೂಡಿಸುತ್ತ ಬಂದಿದ್ದು, ಈ ಬಾರಿ ಎತ್ತುಗಳೊಂದಿಗೆ ಕೃಷಿ ಕಾರ್ಯದಲ್ಲಿ ನಿರತನಾಗಿರುವ ಗಣನಾಯಕನನ್ನು ಪ್ರತಿಷ್ಠಾಪಿಸಿರುವುದು ಗಮನ ಸೆಳೆಯುತ್ತಿದೆ. ಕೋರ್ಟ್ ಎದುರಿನ ಪುರಸಭೆ ರಸ್ತೆಯಲ್ಲಿ ಹಿಂದು ಜಾಗರಣ ವೇದಿಕೆ ಪ್ರತಿಷ್ಠಾಪಿಸಿರುವ ಗಣೇಶ ಮೂರ್ತಿಯ ಅಕ್ಕಪಕ್ಕ ವೀರ ಸಾವರ್ಕರ್ ಹಾಗೂ ಬಾಲ ಗಂಗಾಧರ ತಿಲಕರ ಭಾವಚಿತ್ರ ಇಟ್ಟು ಪೂಜಿಸಲಾಯಿತು.

ಸಂತೆ ಮೈದಾನದಲ್ಲಿ ಗಣಪತಿ ಪಕ್ಕದಲ್ಲಿ ನಟ ಪುನೀತ್ ರಾಜಕುಮಾರ್ ಮೂರ್ತಿ ಇಟ್ಟು ಪೂಜಿಸಿದ್ದು ವಿಶೇಷವಾಗಿತ್ತು. ಇನ್ನು ಬನ್ನಿಕಟ್ಟಿ ಆವರಣದಲ್ಲಿ ಅಯೋಧ್ಯೆಯ ರಾಮ ಮಂದಿರ ನಿರ್ಮಾಣದ ಪರಿಕಲ್ಪನೆಯ ಸನ್ನಿವೇಶ ಇರುವ ಮೂರ್ತಿ ಪ್ರತಿಷ್ಠಾಪಿಸಲಾಗಿದೆ. ಹಬ್ಬದ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಕೊಪ್ಪಳ ಎಸ್ಪಿ ಅರುಣಾಂಗ್ಷು, ಡಿವೈಎಸ್ಪಿ ರುದ್ರೇಶ ಉಜ್ಜನಕೊಪ್ಪ ಹಾಗೂ ಪೊಲೀಸರು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಪಥಸಂಚಲನ ನಡೆಸಿ ಜಾಗೃತಿ ಮೂಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net