ನರೇಗಾದಡಿ ಸಮರ್ಪಕ ಕೆಲಸ ನೀಡಿ: ಕುಷ್ಟಗಿ ತಾಪಂ ಕಚೇರಿ ಎದುರು ಕೂಲಿ ಕಾರ್ಮಿಕರ ಪ್ರತಿಭಟನೆ

220922 Kushtagi labors Protest
ಕುಷ್ಟಗಿ ತಾಪಂ ಸಹಾಯಕ ನಿರ್ದೇಶಕರಾದ ಹನುಮಂತಗೌಡ ಪೊಲೀಸ್ ಪಾಟೀಲ್ ಹಾಗೂ ವಿಶ್ವನಾಥ ರಾಠೋಡ್‌ಗೆ ಕೂಲಿ ಕಾರ್ಮಿಕರ ಸಂಘಟನೆ ಪದಾಧಿಕಾರಿಗಳು ಮನವಿ ಸಲ್ಲಿಸಿದರು.
Published on

ಕುಷ್ಟಗಿ: ನರೇಗಾ ಯೋಜನೆಯಡಿ ಸಮರ್ಪಕ ಕೆಲಸ ನೀಡಬೇಕೆಂದು ಆಗ್ರಹಿಸಿ ಕೃಷಿ ಕೂಲಿ ಕಾರ್ಮಿಕರ ಸಂಘಟನೆ ಪದಾಧಿಕಾರಿಗಳು ಪಟ್ಟಣದ ತಾಪಂ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿದರು. ಅತಿವೃಷ್ಟಿ ಹಾಗೂ ಸರ್ಕಾರದ ಹೊಸ ನೀತಿಗಳಿಂದ ಕೂಲಿ ಕಾರ್ಮಿಕರು ಸಂಕಷ್ಟ ಎದುರಿಸುವಂತಾಗಿದೆ.

ಕುಟುಂಬವೊಂದಕ್ಕೆ 200 ದಿನ ಕೆಲಸ ನೀಡಬೇಕು. ಸಾಮಗ್ರಿ ವೆಚ್ಚ ನೀಡುವುದನ್ನು ಮುಂದುವರಿಸಬೇಕು. ಕೂಲಿ ಪಾವತಿ ವಿಳಂಬವಾದರೆ ಭತ್ಯೆ ನೀಡುವುದು ಸೇರಿ ಮತ್ತಿತರರ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿದರು. ತಾಪಂ ಸಹಾಯಕ ನಿರ್ದೇಶಕರಾದ ಹನುಮಂತಗೌಡ ಪೊಲೀಸ್ ಪಾಟೀಲ್ ಹಾಗೂ ವಿಶ್ವನಾಥ ರಾಠೋಡ್‌ಗೆ ಮನವಿ ಸಲ್ಲಿಸಿದರು. ಸಂಘಟನೆಯ ವಿರುಪಮ್ಮ ದೊಡ್ಡಮನಿ, ನೇತ್ರಾ ಕ್ಯಾದಿಗುಂಪಿ, ಬಸವರಾಜ, ಎನ್.ಎಸ್.ಅಂಗಡಿ, ಭೀಮವ್ವ, ನಾಗರತ್ನ, ಹನುಮವ್ವ ಬಸಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net