

ಕುಷ್ಟಗಿ: ನದಾಫ್ (ಪಿಂಜಾರ) ಸೇರಿ ಇತರ 13 ಜಾತಿಗಳ ಅಭಿವೃದ್ಧಿ ನಿಗಮಕ್ಕೆ ಅನುದಾನ ನೀಡುವಂತೆ ಒತ್ತಾಯಿಸಿ ನದಾಫ್ ಪಿಂಜಾರ ಸಂಘದ ಪದಾಧಿಕಾರಿಗಳು ಮುಖ್ಯಮಂತ್ರಿಗೆ ಬರೆದ ಪತ್ರವನ್ನು ಗ್ರೇಡ್ 2 ತಹಸೀಲ್ದಾರ್ ಮುರುಳೀಧರ ಮುಕ್ತೇದಾರ್‌ಗೆ ಸೋಮವಾರ ಸಲ್ಲಿಸಿದರು.
ನದಾಫ್ ಪಿಂಜಾರ ಸಮುದಾಯ ಸಾಮಾಜಿಕ, ಶೈಕ್ಷಣಿಕ, ರಾಜಕೀಯವಾಗಿ ಹಿಂದುಳಿದಿದೆ. ತಾಂತ್ರಿಕ ದೋಷ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮ ಹಾಗೂ ಇತರ ಯೋಜನೆಗಳ ಲಾಭ ಸಿಗದೆ ಹೋರಾಟಕ್ಕಿಳಿಯಬೇಕಾಯಿತು. ಪರಿಣಾಮವಾಗಿ ಈ ಹಿಂದಿನ ಸರ್ಕಾರ ನದಾಫ್/ಪಿಂಜಾರ ಹಾಗೂ ಇತರ 13 ಜಾತಿಗಳ ಅಭಿವೃದ್ಧಿ ನಿಗಮ ಸ್ಥಾಪಿಸಿದೆ. ನಿಗಮಕ್ಕೆ ಅನುದಾನ ಬಿಡುಗಡೆ ಮಾಡುವಂತೆ ಒತ್ತಾಯಿಸುತ್ತ ಬರಲಾಗಿದೆ. ಸರ್ಕಾರ ಸ್ಪಂದಿಸದೆ ಸಮುದಾಯದ ಬೇಡಿಕೆಯನ್ನು ಕಡೆಗಣಿಸಿದೆ. ಸಮುದಾಯದ ಹಿತಾಸಕ್ತಿಯಿಂದ ಶೀಘ್ರವೇ ಅನುದಾನ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿದರು.
ಸಂಘದ ಪದಾಧಿಕಾರಿಗಳಾದ ಮೆಹಬೂಬ್‌ಸಾಬ್ ನೆರೆಬೆಂಚಿ, ಹುಸೇನ್‌ಸಾಬ್ ನದಾಫ್, ಯಮನೂರ್‌ಸಾಬ್ ನದಾಫ್, ಮೋದಿನ್‌ಸಾಬ್, ಫಕೀರಸಾಬ್ ನದಾಫ್ ಇತರರು ಇದ್ದರು.