

ಕುಷ್ಟಗಿ: ಹಿಂಬದಿಯಿಂದ ಲಾರಿ ಡಿಕ್ಕಿಯಾಗಿ ಬೈಕ್‌ನಲ್ಲಿ ತೆರಳುತ್ತಿದ್ದ ತಾಯಿ ಮತ್ತು ಮಗು ಸ್ಥಳದಲ್ಲೇ ಮೃತಪಟ್ಟಿರುವುದು ಸೋಮವಾರ ಸಂಜೆ ಪಟ್ಟಣ ಹೊರವಲಯದ ಚತುಷ್ಪತ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.
ತಾಲೂಕಿನ ತಳುವಗೇರಾ ಗ್ರಾಮದ ಚೈತ್ರಾ ಪ್ರಭು ಗಡಾದ (35) ಹಾಗೂ ಪ್ರಮೋದ ಗಡಾದ (4) ಮೃತರು. ಬೈಕ್ ಚಲಾಯಿಸುತ್ತಿದ್ದ ಮೃತಳ ಸಹೋದರ ಮಂಜುನಾಥಗೆ ತರಚಿದ ಗಾಯಗಳಾಗಿವೆ. ತವರು ಮನೆಗೆಂದು ಗಂಗಾವತಿ ತಾಲೂಕಿನ ವೆಂಕಟಾಪುರ ಗ್ರಾಮಕ್ಕೆ ಬೈಕ್‌ನಲ್ಲಿ ತೆರಳುತ್ತಿರುವಾಗ ರಾಜಸ್ತಾನ ಮೂಲದ ಲಾರಿ ಡಿಕ್ಕಿ ಹೊಡೆದಿದೆ. ಲಾರಿ ಚಾಲಕ ರಮೇಶ ಸತ್ಯವೇಲು ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸಿಪಿಐ ಯಶವಂತ ಬಿಸನಳ್ಳಿ, ಪಿಎಸ್‌ಐ ಹನುಮಂತಪ್ಪ ತಳವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.