ಬಾಲಕರ ಸಹಿಪ್ರಾ ಶಾಲಾ ಅಭಿವೃದ್ಧಿಗೆ ಒತ್ತಾಯ

23022020 Kustagi MLA Bayyapur appeal
Published on

ಶಾಸಕ ಅಮರೇಗೌಡ ಪಾಟೀಲ್ ಬಯ್ಯಪುರಗೆ ಮನವಿ

ಕುಷ್ಟಗಿ: ಪಟ್ಟಣದ ಬಾಲಕರ ಸಹಿಪ್ರಾಶಾಲೆಯ ಅಭಿವೃದ್ಧಿ ಕಾಮಗಾರಿ ಕೈಗೊಳ್ಳುವಂತೆ ಒತ್ತಾಯಿಸಿ ಶಾಸಕ ಅಮರೇಗೌಡ ಪಾಟೀಲ್ ಬಯ್ಯಪುರಗೆ ಕುಷ್ಟಗಿ ತಾಲೂಕಾ ಶಾಲಾ ಪುನಶ್ಚೇತನ ಚಾರಿಟಬಲ್ ಟ್ರಸ್ಟ್‌ನ ಪದಾಧಿಕಾರಿಗಳು ಭಾನುವಾರ ಮನವಿ ಸಲ್ಲಿಸಿದರು.

ಬೆಳಗ್ಗೆ ಶಾಲೆಗೆ ಭೇಟಿ ನೀಡಿದ ವೇಳೆ ಶಾಲೆಯ ಶಿಥಿಲ ಕೊಠಡಿ, ಕಾಂಪೌಂಡ್ ಸೇರಿ ಮೂಲ ಸೌಕರ್ಯ ಸಮಸ್ಯೆ ಕುರಿತು ವಿವರಿಸಿದ ಪದಾಧಿಕಾರಿಗಳು, ಶಾಲೆಗೆ ಎತ್ತರದ ಕಾಂಪೌಂಡ್ ಹಾಗೂ ಗೇಟ್ ನಿರ್ಮಿಸುವುದು, ಶಾಲೆಯ ಹಳೇ ಕೊಠಡಿ ನೆಲಸಮಗೊಳಿಸುವುದು, ಶುದ್ಧ ಕುಡಿವ ನೀರಿನ ವ್ಯವಸ್ಥೆ, ಶೌಚಗೃಹ ನಿರ್ಮಾಣ, ಮಕ್ಕಳ ಹಾಜರಾತಿ ಹೆಚ್ಚಿಸಲು ಸಹಕರಿಸುವಂತೆ ಮನವಿ ಮಾಡಿದರು.

ಟ್ರಸ್ಟ್‌ನ ಅಧ್ಯಕ್ಷ ಮಹಾಂತಯ್ಯ ಅರಳೆಲೆಮಠ, ಉಪಾಧ್ಯಕ್ಷರಾದ ತಾಜುದ್ದೀನ್ ದಳಪತಿ, ಕಂಟೆಪ್ಪ ಪೂಜಾರ, ಶಾಲೆಯ ಹಳೇ ವಿದ್ಯಾರ್ಥಿಗಳಾದ ಜಿ.ಕೆ,ಹಿರೇಮಠ, ನಾಗರಾಜ ಮೇಲಿನಮನಿ, ಮಂಜುನಾಥ ಕಟ್ಟಿಮನಿ, ಕೃಷ್ಣಮೂರ್ತಿ ಟೆಂಗುಂಟಿ ಇತರರಿದ್ದರು.

ಆಸಕ್ತಿಯಿಂದ ಕೆಲಸ ಮಾಡಿ: ತಾಲೂಕಿನ ಕೆಲ ಶಾಲೆಗಳ ಶಿಕ್ಷಕರು ಅನಗತ್ಯ ಶಾಲೆಗೆ ಚಕ್ಕರ್ ಹಾಕುತ್ತಿದ್ದಾರೆ. ಶಾಲೆಗಳ ಅಭಿವೃದ್ಧಿ ಆಯಾ ಶಾಲೆಯ ಶಿಕ್ಷಕರ ಮೇಲೆ ಅವಲಂಬಿತವಾಗಿರುತ್ತದೆ. ಆಸಕ್ತಿಯಿಂದ ಪಾಠ ಬೋಧನೆ ಮಾಡುವ ಮೂಲಕ ಮಕ್ಕಳ ಹಾಜರಾತಿ ಹೆಚ್ಚಿಸುವ ಕಾರ್ಯವನ್ನು ಶಿಕ್ಷಕರು ಮಾಡಬೇಕಿದೆ. ಸಮುದಾಯದ ಸಹಕಾರದಿಂದ ಶಾಲೆ ಪುನಶ್ಚೇನಗೊಳ್ಳುತ್ತಿದ್ದು, ಮಕ್ಕಳ ಸಂಖ್ಯೆ ಹೆಚ್ಚಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವಂತೆ ಶಾಲೆಯ ಮುಖ್ಯಶಿಕ್ಷಕಿ ರತ್ನಮ್ಮ ದೇಸಾಯಿಗೆ ಶಾಸಕ ಬಯ್ಯಪುರ ಸೂಚಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net