ನಾಡಿನ ಜನರ ತಾಳ್ಮೆ ಪರೀಕ್ಷೆ

201221 Kushtagi Halumata Mahasaba Appeal
ಎಂಎಇಎಸ್ ನಿಷೇಧಿಸುವಂತೆ ಆಗ್ರಹಿಸಿ ಮುಖ್ಯಮಂತ್ರಿಗೆ ಬರೆದ ಮನವಿಯನ್ನು ಕುಷ್ಟಗಿ ಗ್ರೇಡ್ 2 ತಹಸೀಲ್ದಾರ್ ಮುರುಳಿಧರಗೆ ಹಾಲುಮತ ಮಹಾಸಭಾ ತಾಲೂಕು ಘಟಕ ಸೋಮವಾರ ಸಲ್ಲಿಸಿತು.
Published on

ಕುಷ್ಟಗಿ: ರಾಜ್ಯದಲ್ಲಿ ಎಂಇಎಸ್ ನಿಷೇಧಿಸಬೇಕು ಎಂದು ಆಗ್ರಹಿಸಿ ತಾಲೂಕು ಹಾಲುಮತ ಮಹಾಸಭಾದ ಪದಾಧಿಕಾರಿಗಳು ಪಟ್ಟಣದ ತಹಸಿಲ್ ಕಚೇರಿ ಆವರಣದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು. ರಾಜ್ಯದಲ್ಲಿದ್ದು ಇಲ್ಲಿನ ಎಲ್ಲ ಅನುಕೂಲತೆ ಪಡೆದು ನಾಡದ್ರೋಹಿ ಕೆಲಸ ಮಾಡುತ್ತಿರುವ ಎಂಇಎಸ್, ಸ್ವಾತಂತ್ರ್ಯ ಹೋರಾಟಗಾರರ ಪ್ರತಿಮೆಗಳನ್ನು ವಿರೂಪಗೊಳಿಸಿ ನಾಡಿನ ಜನರ ತಾಳ್ಮೆ ಪರೀಕ್ಷೆ ಮಾಡುತ್ತಿದೆ. ಅಧಿವೇಶನ ವೇಳೆ ಗಲಾಟೆ ಮಾಡಿದವರು ಹಾಗೂ ಪ್ರತಿಮೆ ವಿರೂಪಗೊಳಿಸಿದವರನ್ನು ಗೂಂಡಾ ಕಾಯಿದೆಯಡಿ ಬಂಧಿಸಬೇಕು ಎಂದು ಒತ್ತಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net