ಆರೋಗ್ಯಪೂರ್ಣ ಜೀವನ ಶೈಲಿ ರೂಢಿಸಿಕೊಳ್ಳಿ: ಕುಷ್ಟಗಿ ಸರ್ಕಾರಿ ಆಸ್ಪತ್ರೆ ವೈದ್ಯಾಧಿಕಾರಿ ಕೆ.ಎಸ್.ರಡ್ಡಿ ಸಲಹೆ

26112022 kustagi protein kit distribution
Published on

ಕುಷ್ಟಗಿ: ಯಾವುದೇ ಕಾಯಿಲೆಯನ್ನು ಪ್ರಾಥಮಿಕ ಹಂತದಲ್ಲಿಯೇ ಗುರುತಿಸಿ ಚಿಕಿತ್ಸೆ ಪಡೆಯಬೇಕು ಎಂದು ತಾಲೂಕು ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಕೆ.ಎಸ್.ರಡ್ಡಿ ಸಲಹೆ ನೀಡಿದರು.

ತಾಲೂಕು ಆಸ್ಪತ್ರೆಯಲ್ಲಿ ಶನಿವಾರ ಇನ್ನರ್ ವ್ಹೀಲ್ ಕ್ಲಬ್ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಕ್ಷಯ ರೋಗಿಗಳಿಗೆ ಪೌಷ್ಟಿಕ ಆಹಾರದ ಕಿಟ್ ವಿತರಿಸಿ ಮಾತನಾಡಿದರು. ಎಲ್ಲ ರೋಗಗಳಿಗೂ ಔಷಧವೊಂದೇ ಪರಿಹಾರ ಎಂದು ಭಾವಿಸದೆ ಪೌಷ್ಟಿಕ ಆಹಾರ ಸೇವನೆಯ ಜತೆ ಆರೋಗ್ಯಪೂರ್ಣ ಜೀವನ ಶೈಲಿ ರೂಢಿಸಿಕೊಳ್ಳಬೇಕು. ಮನೆಯ ಪರಿಸ್ಥಿತಿ ಹೇಗೆಯೇ ಇರಲಿ ಆವರಣದಲ್ಲಿ ಕೈತೋಟ ನಿರ್ಮಿಸಿಕೊಂಡು ವಿವಿಧ ತರಕಾರಿ ಬೆಳೆದು ನಿತ್ಯ ಸೇವಿಸಬೇಕು. ಆಹಾರದಲ್ಲಿ ದ್ವಿದಳ ಧಾನ್ಯ ಬಳಕೆ ಮಾಡಬೇಕು. ಕ್ಷಯ ರೋಗದಲ್ಲಿ ಹಲವು ಬಗೆಗಳಿವೆ. ಪುಪ್ಪಸಕ್ಕೆ ಬರುವ ರೋಗ ಅಪಾಯಕಾರಿ ಜತೆಗೆ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ಹೀಗಾಗಿ ಮುಂಜಾಗ್ರತೆ ವಹಿಸಬೇಕು. ಆ ಮೂಲಕ ಕ್ಷಯರೋಗ ಮುಕ್ತ ದೇಶವನ್ನಾಗಿಸಬೇಕಿದೆ ಎಂದರು.

ಇನ್ನರ್‌ವ್ಹೀಲ್ ಕ್ಲಬ್ ಅಧ್ಯಕ್ಷೆ ಸುಮಾ ಬ್ಯಾಳಿ ಮಾತನಾಡಿ, ಕ್ಷಯರೋಗಿಗಳು ಸಕಾಲಕ್ಕೆ ವೈದ್ಯರ ಸಲಹೆ ಪಡೆದು ಚಿಕಿತ್ಸೆ ಪಡೆದರೆ ಗುಣರಾಗಬಹುದು. ಇಂತಹ ರೋಗಿಗಳಿಗೆ ನೆರವಾಗಲು ಕ್ಲಬ್‌ನಿಂದ ಪ್ರೋಟೀನ್ ಕಿಟ್ ವಿತರಿಸಲಾಗುತ್ತಿದೆ ಎಂದರು. ಕ್ಲಬ್‌ನ ಮಾಜಿ ಅಧ್ಯಕ್ಷೆ ಶಾರದಾ ಶೆಟ್ಟರ್, ಕಾರ್ಯದರ್ಶಿ ಗೌರಮ್ಮ ಕುಡತಿನಿ, ಡಾ.ಕುಮುದಾ ಪಲ್ಲೇದ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net