ಜಗದ್ಗುರುಗಳು ಒಂದೇ ಸಮುದಾಯಕ್ಕೆ ಸೀಮಿತವಲ್ಲ; ಕರಿಬಸವೇಶ್ವರ ಸ್ವಾಮೀಜಿ ಅಭಿಮತ

26 TVG 1
ಜಗದ್ಗುರು ಶ್ರೀ ರೇಣುಕಾಚಾರ್ಯರ ಜಯಂತಿ ಅಂಗವಾಗಿ ತಾವರಗೇರಾದಲ್ಲಿ ಹಮ್ಮಿಕೊಂಡಿದ್ದ ಧರ್ಮಸಭೆಯನ್ನು ಕುಷ್ಟಗಿಯ ಮದ್ದಾನೇಶ್ವರ ಮಠದ ಕರಿಬಸವೇಶ್ವರ ಸ್ವಾಮೀಜಿ ಉದ್ಘಾಟಿಸಿದರು. ಪ್ರಮುಖರಾದ ಶೇಖರಗೌಡ ಪೊಲೀಸ್ ಪಾಟೀಲ್, ಮಲ್ಲನಗೌಡ ಓಲಿ, ಮಲ್ಲಪ್ಪ ಜುಮಲಾಪುರ, ವೀರಗಂಗಾಧರ ಸ್ವಾಮಿ, ಅರಳೆಲೆಮಠ, ಮಂಜುನಾಥ್ ಇತರರಿದ್ದರು.
Published on

ತಾವರಗೇರಾ: ಜಗದ್ಗುರು ಶ್ರೀ ರೇಣುಕಾಚಾರ್ಯರು ಕೇವಲ ಜಂಗಮ ಸಮುದಾಯಕ್ಕೆ ಸೀಮಿತವಾಗಿಲ್ಲ ಎಂದು ಕುಷ್ಟಗಿಯ ಮದ್ದಾನೇಶ್ವರ ಮಠದ ಕರಿಬಸವೇಶ್ವರ ಸ್ವಾಮೀಜಿ ಹೇಳಿದರು.


ಶ್ರೀರೇಣುಕಾಚಾರ್ಯರ ಜಯಂತಿ ಅಂಗವಾಗಿ ಪಟ್ಟಣದ ವೀರಭದ್ರೇಶ್ವರ ಕಲ್ಯಾಣ ಮಂಟಪದಲ್ಲಿ ಜಂಗಮ ಕ್ಷೇಮಾಭಿವೃದ್ಧಿ ಸಂಘ ಏರ್ಪಡಿಸಿದ್ದ ಧರ್ಮಸಭೆಯಲ್ಲಿ ಮಾತನಾಡಿದರು. ವೀರಶೈವ ಲಿಂಗಾಯತರೂ ಸಹ ರೇಣುಕಾಚಾರ್ಯರ ಭಕ್ತರಾಗಿದ್ದಾರೆ. ಮುಂದಿನ ವರ್ಷ ರೇಣುಕಾಚಾರ್ಯರ ಜಯಂತಿ ಆಚರಿಸುವಾಗ ಎಲ್ಲ ವೀರಶೈವ ಲಿಂಗಾಯತರನ್ನು ಒಗ್ಗೂಡಿಸಬೇಕು. ಸರ್ಕಾರ ರೇಣುಕಾಚಾರ್ಯರ ಜಯಂತಿ ಆಚರಿಸಲು ಮುಂದಾಗಿರುವುದು ಸಂತಸದ ಸಂಗತಿ ಎಂದ ಅವರು, ಜಂಗಮ ಸಮುದಾಯ ಸೇರಿ ಎಲ್ಲ ವೀರಶೈವ ಲಿಂಗಾಯತರು ಕೊರಳಲ್ಲಿ ಲಿಂಗ ಧರಿಸಬೇಕು. ಸದ್ಯ ಜನರಲ್ಲಿ ಸಂಸ್ಕಾರದ ಕೊರತೆ ಇದೆ. ಧರ್ಮವನ್ನು ರಕ್ಷಿಸಿದರೆ, ಧರ್ಮ ನಮ್ಮನ್ನು ರಕ್ಷಿಸುವುದು ಎಂದರು.

ಕುಷ್ಟಗಿಯ ಉದ್ಯಮಿ ರವಿ ಹಿರೇಮಠ, ಶಿವರಾಜ್ ಶಾಸ್ತ್ರಿ ರಾಂಪುರ, ಕುಷ್ಟಗಿಯ ನಿವೃತ್ತ ಶಿಕ್ಷಕ ಮಹಾಂತಯ್ಯ ಹಿರೇಮಠ ಮಾತನಾಡಿದರು. ಇದಕ್ಕೂ ಮುನ್ನ ಗಾಂಧಿಚೌಕ್‌ನಿಂದ ಆರಂಭವಾದ ರೇಣುಕಾಚಾರ್ಯರ ಭಾವಚಿತ್ರ ಮೆರವಣಿಗೆ ಮೇನ್ ಬಜಾರ, ಬಸವೇಶ್ವರ ವೃತ್ತ, ಶಾಮೀದ್ ಅಲಿವೃತ್ತದ ಮೂಲಕ ಸಾಗಿ ವೀರಭದ್ರೇಶ್ವರ ದೇವಸ್ಥಾನದಲ್ಲಿ ಸಮಾಪ್ತಿಗೊಂಡಿತು. ವಾದ್ಯ ಮೇಳದೊಂದಿಗೆ ಸುಮಂಗಲೆಯರ ಕುಂಭ ಹೊತ್ತು ಸಾಗಿದರು.


ಜಂಗಮ ಸಮಾಜದ ತಾಲೂಕು ಘಟಕದ ಉಪಾಧ್ಯಕ್ಷ ಗುರುಮೂರ್ತಿ ಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ಶೇಖರಗೌಡ ಪೊಲೀಸ್ ಪಾಟೀಲ್, ಮಲ್ಲನಗೌಡ ಓಲಿ, ಮಲ್ಲಪ್ಪ ಜುಮಲಾಪುರ, ವೀರಗಂಗಾಧರ ಸ್ವಾಮಿ, ಅರಳೆಲೆಮಠ, ಮಂಜುನಾಥ್ ಚಪ್ಪರಮಠ, ಈಶ್ವರ ಬಾಗವಾನ ಮಠ, ಸುಮಾ ಹಿರೇಮಠ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net