ಬೆಂಕಿಗೆ ಆಹುತಿಯಾದ ಬಣವಿಗಳು

FAIR
ಕುಷ್ಟಗಿ ತಾಲೂಕಿನ ಎಂ.ಗುಡದೂರು ಗ್ರಾಮದಲ್ಲಿ ಬಣವಿಗಳಿಗೆ ಹೊತ್ತಿದ ಬೆಂಕಿ ನಂದಿಸುತ್ತಿರುವ ಅಗ್ನಿಶಾಮಕ ಸಿಬ್ಬಂದಿ.
Published on

ಕುಷ್ಟಗಿ: ತಾಲೂಕಿನ ಎಂ.ಗುಡದೂರು ಗ್ರಾಮದಲ್ಲಿ ಆಕಸ್ಮಿಕ ಬೆಂಕಿ ತಗುಲಿ ಹೊಟ್ಟು ಹಾಗೂ ಮೇವಿನ ಬಣವಿಗಳು ಸುಟ್ಟು ಭಸ್ಮವಾಗಿವೆ. ಗ್ರಾಮದ ಶರಣಪ್ಪ ತಾಲೂಕಿನ ಎಂ.ಗುಡದೂರು ಗ್ರಾಮದಲ್ಲಿ ಆಕಸ್ಮಿಕ ಬೆಂಕಿ ತಗುಲಿ ಹೊಟ್ಟು ಹಾಗೂ ಮೇವಿನ ಬಣವಿಗಳು ಸುಟ್ಟು ಭಸ್ಮವಾಗಿವೆ.

ಗ್ರಾಮದ ಶರಣಪ್ಪ ಕೂಡ್ಲೂರು ಎಂಬುವರಿಗೆ ಸೇರಿದ ಹೊಟ್ಟು ಹಾಗೂ ಮೇವಿನ ಬಣವಿ, ರಾಚಪ್ಪ ಕೂಡ್ಲೂರು ಎಂಬುವರಿಗೆ ಸೇರಿದ ನವಣೆ ಹುಲ್ಲಿನ ಬಣವಿ ಸುಟ್ಟಿವೆ. ಸ್ಥಳಕ್ಕೆ ಅಗ್ನಿಶಾಮಕ ಠಾಣೆ ಸಿಬ್ಬಂದಿ ಧಾವಿಸಿ ಬೆಂಕಿ ನಂದಿಸಿ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ.

ಬರ ಆವರಿಸಿ ಮೇವಿನ ಕೊರತೆ ಎದುರಿಸುತ್ತಿದ್ದ ರೈತರಿಗೆ ಬೆಂಕಿ ಅನಾಹುತ ಗಾಯದ ಮೇಲೆ ಬರೆ ಎಳೆದಂತಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net