ಕೊಡುಗೆ ಮೂಲಕ ಮಾತೃಭೂಮಿ ಋಣ ತೀರಿಸಿ

Kustagi kargil day
ಕುಷ್ಟಗಿಯ ವೀರ ಯೋಧ ಮಲ್ಲಯ್ಯ ವೃತ್ತಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಮಾಜಿ ಸೈನಿಕರು ಕಾರ್ಗಿಲ್ ವಿಜಯೋತ್ಸವ ಆಚರಿಸಿದರು. ಮಾಜಿ ಸೈನಿಕರ ಸಂಘದ ಅಧ್ಯಕ್ಷ ಸುಭಾಷ್ ಮಡಿವಾಳರ್, ಮಾಜಿ ಸೈನಿಕರಾದ ಭೀಮನಗೌಡ ಪಾಟೀಲ್ ಜಾಲಿಹಾಳ, ಬಸನಗೌಡ, ಹನುಮಂತಪ್ಪ ಹಿರೇಮನಿ, ಶಿವಾಜಿ ಹಡಪದ, ಅಡಿವೆಪ್ಪ ಅಮರಾವತಿ, ಡಾ.ರಾಜಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಮುತ್ತಣ್ಣ ಬಾಚಲಾಪುರ ಇತರರು ಇದ್ದರು.
Published on


ಕುಷ್ಟಗಿ: ದೇಶಕ್ಕೆ ಕೊಡುಗೆ ನೀಡುವ ಮೂಲಕ ಮಾತೃಭೂಮಿ ಋಣ ತೀರಿಸಬೇಕಿದೆ ಎಂದು ಪಿಎಸ್‌ಐ ಹನುಮಂತಪ್ಪ ತಳವಾರ ಹೇಳಿದರು.

ಕಾರ್ಗಿಲ್ ವಿಜಯೋತ್ಸವ ನಿಮಿತ್ತ ಪಟ್ಟಣದ ವೀರಯೋಧ ಮಲ್ಲಯ್ಯ ವೃತ್ತಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು. ಗಡಿಯಲ್ಲಿ ಜೀವದ ಹಂಗು ತೊರೆದು ರಕ್ಷಣಾ ಕಾರ್ಯದಲ್ಲಿರುವ ಸೈನಿಕರಿಗೆ ಗೌರವ ಸಮರ್ಪಿಸುವ ಜತೆಗೆ ಅವರ ಕುಟುಂಬಗಳ ರಕ್ಷಣೆಗೆ ನಿಲ್ಲಬೇಕಿದೆ ಎಂದರು.

ಮಾಜಿ ಸೈನಿಕರ ಸಂಘದ ಅಧ್ಯಕ್ಷ ಸುಭಾಷ್ ಮಡಿವಾಳರ್, ಮಾಜಿ ಸೈನಿಕರಾದ ಭೀಮನಗೌಡ ಪಾಟೀಲ್ ಜಾಲಿಹಾಳ, ಬಸನಗೌಡ, ಹನುಮಂತಪ್ಪ ಹಿರೇಮನಿ, ಶಿವಾಜಿ ಹಡಪದ, ಅಡಿವೆಪ್ಪ ಅಮರಾವತಿ, ಡಾ.ರಾಜಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಮುತ್ತಣ್ಣ ಬಾಚಲಾಪುರ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net