ಕುಷ್ಟಗಿಯಲ್ಲಿ ಗೋ ಪೂಜೆ

UNTILETED 11
Published on

ಕುಷ್ಟಗಿ: ಪಟ್ಟಣದ ಕನ್ಯಕಾ ಪರಮೇಶ್ವರಿ ದೇವಸ್ಥಾನದಲ್ಲಿ ಆರ್ಯವೈಶ್ಯ ಸಮುದಾಯದಿಂದ ಬುಧವಾರ ವಾಸವಿ ಜಯಂತಿ ಆಚರಿಸಲಾಯಿತು.

ಗೋವು ಪೂಜೆಯೊಂದಿಗೆ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಕನ್ಯಕಾ ಪರಮೇಶ್ವರಿ ಮೂರ್ತಿಗೆ ರುದ್ರಾಭಿಷೇಕ, ಪಂಚಾಮೃತ ಅಭಿಷೇಕದೊಂದಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. 25 ಮಕ್ಕಳಿಗೆ ಬಾಲ ಕನ್ಯೆ ಪೂಜೆ ನೆರವೇರಿಸಲಾಯಿತು. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಮೇಘಶ್ರೀ ರೇವಡಿ, ರಾಮು ಸಿರಗುಂಪಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಸಮುದಾಯದ ಪ್ರಮೋದ್ ಇಲ್ಲೂರ, ಸಂಜನಾ ರೇವಡಿಗೆ ಸನ್ಮಾನಿಸಿ ಪ್ರೋತ್ಸಾಹಿಸಲಾಯಿತು.

ಆರ್ಯ ವೈಶ್ಯ ಸಮುದಾಯದ ತಾಲೂಕು ಅಧ್ಯಕ್ಷ ಅಮರೇಶ ಶೆಟ್ಟರ್, ಉಪಾಧ್ಯಕ್ಷ ಓಂಕಾರಪ್ಪ ಕಂದಕೂರು, ಖಜಾಂಚಿ ವಿಠ್ಠಲ್ ಶೆಟ್ಟರ್, ವಾಸವಿ ಮಹಿಳಾ ಸಮಾಜದ ತಾಲೂಕಾಧ್ಯಕ್ಷೆ ಚಿತ್ರಾ ಕಂದಕೂರು, ಪ್ರಮುಖರಾದ ಹನುಮಂತಯ್ಯ ಕುಷ್ಟಗಿ, ಪ್ರಭಾಕರ ಕಂದಕೂರು, ಸತ್ಯನಾರಾಯಣ ಇಲ್ಲೂರು, ರಾಘವೇಂದ್ರ ಗಿಣಿವಾರ, ಉಮೇಶ ಶೆಟ್ಟರ್, ಕೃಷ್ಣ ಕಂದಕೂರು, ವೆಂಕಟೇಶ ತೆಮ್ಮಿನಾಳ, ಪ್ರಶಾಂತ ಶೆಟ್ಟರ್, ವಿನಯ ಕಂದಕೂರು, ವಾಸವಿ ಮುರಡಿ, ಸುಕನ್ಯಾ ಶೆಟ್ಟರ್, ಭಾಗ್ಯ ಅರಳಿಹಳ್ಳಿ, ಶೋಭಾ ಇಲ್ಲೂರು, ಶಾರದಾ ಶೆಟ್ಟರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net