

ಕುಷ್ಟಗಿ: ಶಿಕ್ಷಕರ ಜತೆಗಿನ ಒಡನಾಟ ಹಾಗೂ ಉತ್ತಮ ಬಾಂಧವ್ಯವೇ ಶಶೀಲ ನಮೋಶಿ ಅವರ ಗೆಲುವಿಗೆ ಕಾರಣವಾಯಿತು ಎಂದು ಮಾಜಿ ಶಾಸಕ ಕೆ.ಶರಣಪ್ಪ ಹೇಳಿದರು.
ಪಟ್ಟಣಕ್ಕೆ ಭೇಟಿ ನೀಡಿದ ವಿಧಾನ ಪರಿಷತ್ ಸದಸ್ಯ ಶಶೀಲ್ ನಮೋಶಿ ಅವರನ್ನು ಶಿಕ್ಷಕರು ಹಾಗೂ ಪಕ್ಷದ ಮುಖಂಡರ ಪರವಾಗಿ ಸನ್ಮಾನಿಸಿ ಮಂಗಳವಾರ ಮಾತನಾಡಿದರು. ನೂತನವಾಗಿ ವಿಧಾನ ಪರಿಷತ್‌ಗೆ ಆಯ್ಕೆಯಾಗಿರುವ ನಮೋಶಿಯವರು ಕಲ್ಯಾಣ ಕರ್ನಾಟಕ ಭಾಗದ ಶೈಕ್ಷಣಿಕ ಅಭಿವೃದ್ಧಿಗೆ ಶ್ರಮಿಸಬೇಕಿದೆ. 371ಜೆ ಪರಿಣಾಮಕಾರಿ ಅನುಷ್ಠಾನಕ್ಕೆ ಪ್ರಯತ್ನಿಸಬೇಕಿದೆ ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ನಮೋಶಿ, ಶಿಕ್ಷಕರ ಸಮಸ್ಯೆ, ಬೇಡಿಕೆಗಳ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಬಗೆಹರಿಸುವ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು. ಶಿಕ್ಷಕರ ಪರವಾಗಿ ಎಸ್.ಎನ್.ಕಡಪಟ್ಟಿ, ಚಂದುಸಾಬ ಪಿಂಜಾರ ಹಾಗೂ ಶರಣಯ್ಯ ಹಿರೇಮಠ ಮಾತನಾಡಿದರು.
ಜಿಪಂ ಸದಸ್ಯ ಕೆ.ಮಹೇಶ, ಪ್ರಮುಖರಾದ ವಿಜಯಕುಮಾರ ಹಿರೇಮಠ, ಚಂದ್ರಕಾಂತ ವಡಿಗೇರಿ, ಅಮರೇಗೌಡ ಪಾಟೀಲ್ ಜಾಲಿಹಾಳ, ಶಶಿಧರ ಕವಲಿ, ಶಿಕ್ಷಕರಾದ ಬಸವಂತಗೌಡ ಮೇಟಿ, ಈಶಪ್ಪ ತಳವಾರ, ಎಂ.ಎಂ.ಗೊಣ್ಣಾಗರ, ಯಮನಪ್ಪ ಚೂರಿ, ರಾಯಪ್ಪ ಹೂಗಾರ, ಬಾಬು ಸುಂಕದ್, ಮಲ್ಲಪ್ಪ ಭಂಡಾರಿ, ಡಾ.ಶರಣಪ್ಪ ನಿಡಶೇಸಿ, ಹನುಮಂತ ತೋಟದ್, ರಾಜು ಬಾಳಿತೋಟ, ನಾಗಪ್ಪ ಬಿಳಿಯಪ್ಪನವರ್, ಗುರುಪ್ಪ ಕುರಿ ಇತರರು ಇದ್ದರು.