19 ಹಳ್ಳಿಗಳನ್ನು ಸಿಂಧನೂರು ತಾಲೂಕಿನಲ್ಲಿ ಉಳಿಸಿ

UNTILETED (14)
ಕಲಮಂಗಿ ಗ್ರಾಮಸ್ಥರು ಕುಷ್ಟಗಿ ಹೆದ್ದಾರಿ ಸಂಚಾರ ತಡೆದು ಪ್ರತಿಭಟನೆ ನಡೆಸಿದರು. ಪರ್ವತರಡ್ಡಿ, ನಿರುಪಾದಿ, ಯಮನೂರು ಉಮಲೂಟಿ, ಹೊನ್ನೂರಸಾಬ್, ಅಡಿವೇಶ ಚಿಕ್ಕಬೇರ‌್ಗಿ, ಗಡಗಿ ರಾಮಣ್ಣ ಚಿಕ್ಕಬೇರ‌್ಗಿ ಇತರರಿದ್ದರು.
Published on

ಸಿಂಧನೂರು: ತುರ್ವಿಹಾಳ ಹಾಗೂ ಗುಂಜಳ್ಳಿ ಹೋಬಳಿಯ 19 ಹಳ್ಳಿಗಳನ್ನು ಸಿಂಧನೂರು ತಾಲೂಕಿನಲ್ಲಿ ಉಳಿಸಿಕೊಳ್ಳಬೇಕೆಂದು ಒತ್ತಾಯಿಸಿ ಕಲಮಂಗಿ ಗ್ರಾಮಸ್ಥರು ಕುಷ್ಟಗಿ ಹೆದ್ದಾರಿ ಸಂಚಾರ ತಡೆದು ಪ್ರತಿಭಟನೆ ನಡೆಸಿದರು.

ಮಸ್ಕಿ ವಿಧಾನಸಭಾ ಕ್ಷೇತ್ರ ಮತ್ತು ಸಿಂಧನೂರು ತಾಲೂಕಿಗೆ ಒಳಪಡುವ 19 ಹಳ್ಳಿಗಳನ್ನು ಮಸ್ಕಿ ತಾಲೂಕಿಗೆ ಸೇರ್ಪಡೆ ಮಾಡಲು ಸಿಂಧನೂರು ಶಾಸಕ ಹಂಪನಗೌಡ ಬಾದರ್ಲಿ ಅವರು ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣಪ್ರಕಾಶ ಪಾಟೀಲ್‌ಗೆ ಪತ್ರ ಬರೆದಿದ್ದು ಗೊಂದಲಕ್ಕೀಡಾಗಿದೆ. ಒಂದು ವೇಳೆ ಹಳ್ಳಿಗಳನ್ನು ಮಸ್ಕಿ ತಾಲೂಕಿಗೆ ಸೇರಿಸಿದರೆ ಹೆಚ್ಚಿನ ತೊಂದರೆಯಾಗಲಿದೆ. ಮಸ್ಕಿ ವಿಧಾನಸಭಾ ಕ್ಷೇತ್ರಕ್ಕೆ ಒಳಪಡುವ 2 ಹೋಬಳಿಯ 19 ಹಳ್ಳಿಗಳನ್ನು ಸಿಂಧನೂರು ವಿಧಾನಸಭಾ ಕ್ಷೇತ್ರಕ್ಕೆ ಸೇರ್ಪಡೆ ಮಾಡಿ ಶೈಕ್ಷಣಿಕ, ಆರ್ಥಿಕ ಮತ್ತು ಸಾಮಾಜಿಕವಾಗಿ ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.

ಪರ್ವತರಡ್ಡಿ, ನಿರುಪಾದಿ, ಯಮನೂರು ಉಮಲೂಟಿ, ಹೊನ್ನೂರಸಾಬ್, ಅಡಿವೇಶ ಚಿಕ್ಕಬೇರ‌್ಗಿ, ಗಡಗಿ ರಾಮಣ್ಣ ಚಿಕ್ಕಬೇರ‌್ಗಿ, ಇತರ ನೂರಾರು ಸಂಖ್ಯೆಯ ವಿವಿಧ ಹಳ್ಳಿಗಳ ಜನರು ಭಾಗವಹಿಸಿದ್ದರು. ಒಂದು ತಾಸು ಸಂಚಾರ ತಡೆ ನಡೆಸಿದ್ದರಿಂದ ವಾಹನ ಸವಾರರು, ಪ್ರಯಾಣಿಕರು ತೊಂದರೆ ಅನುಭವಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net