

ಕುಷ್ಟಗಿ: ಸೋಂಕಿತರು ಆರೈಕೆ ಕೇಂದ್ರಗಳಿಗೆ ದಾಖಲಾಗುವ ಮೂಲಕ ಕೋವಿಡ್ ನಿಯಂತ್ರಣಕ್ಕೆ ಸಹಕರಿಸಬೇಕು ಎಂದು ಶಾಸಕ ಅಮರೇಗೌಡ ಪಾಟೀಲ್ ಬಯ್ಯಪುರ ಹೇಳಿದರು.
ಪಟ್ಟಣದ ತಾಲೂಕು ಆಸ್ಪತ್ರೆ ಹಾಗೂ ಕೋವಿಡ್ ಕೇರ್ ಸೆಂಟರ್‌ಗೆ ಸೋಮವಾರ ಭೇಟಿ ನೀಡಿ ಮಾತನಾಡಿದರು. ತಾಲೂಕಿನಲ್ಲಿ ವ್ಯಾಪಕವಾಗಿ ಸೋಂಕು ಹರಡುತ್ತಿದೆ. ಲಾಕ್‌ಡೌನ್‌ನಿಂದಲೂ ಸೋಂಕಿನ ತೀವ್ರತೆ ತಗ್ಗಿಲ್ಲ. ಜನರ ಉದಾಸೀನವೇ ಇದಕ್ಕೆ ಕಾರಣವಾಗಿದೆ. ಕರೊನಾದಿಂದ ಸಾವು, ನೋವು ಸಂಭವಿಸಿದರೂ ಜನತೆ ಎಚ್ಚೆತ್ತುಕೊಳ್ಳುತ್ತಿಲ್ಲ ಎಂದರು. ತಾಲೂಕಿನ ಚಳಗೇರಿ, ಹಿರೇಗೊಣ್ಣಾಗರ, ಮಾಲಗಿತ್ತಿ, ಹನುಮನಾಳ, ಹನುಮಸಾಗರ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ವೈದ್ಯರೊಂದಿಗೆ ಚರ್ಚಿಸಿದರು.