ರೈಲು ನಿಲ್ದಾಣಕ್ಕೆ ಶಾಸಕ ಭೇಟಿ

discussion with officials
ಕುಷ್ಟಗಿ ರೈಲು ನಿಲ್ದಾಣಕ್ಕೆ ವಿಧಾನಸಭೆ ಪ್ರತಿಪಕ್ಷದ ಮುಖ್ಯ ಸಚೇತಕ ದೊಡ್ಡನಗೌಡ ಪಾಟೀಲ್ ಮಂಗಳವಾರ ಭೇಟಿ ನೀಡಿ ಪರಿಶೀಲಿಸಿದರು. ರೈಲ್ವೆ ಇಲಾಖೆ ಎಇಇ ಅಶೋಕ ಮುದಿಗೌಡರ್, ಪ್ರಮುಖರಾದ ಅಶೋಕ ಬಳೂಟಗಿ, ಉಮೇಶ ಯಾದವ್ ಇದ್ದರು.
Published on

ಕುಷ್ಟಗಿ: ಪಟ್ಟಣದ ರೈಲು ನಿಲ್ದಾಣಕ್ಕೆ ವಿಧಾನಸಭೆ ಪ್ರತಿಪಕ್ಷದ ಮುಖ್ಯ ಸಚೇತಕ ದೊಡ್ಡನಗೌಡ ಪಾಟೀಲ್ ಮಂಗಳವಾರ ಭೇಟಿ ನೀಡಿ ಉದ್ಘಾಟನೆ ಕಾರ್ಯಕ್ರಮ ಆಯೋಜಿಸುವ ಸಂಬಂಧ ಅಧಿಕಾರಿಗಳೊಂದಿಗೆ ಚರ್ಚಿಸಿದರು.

ಪಟ್ಟಣದಲ್ಲಿ ಹಾದು ಹೋಗಿರುವ ಗದಗ-ವಾಡಿ ರೈಲು ಮಾರ್ಗಕ್ಕೆ ಮೇ 10ರಂದು ಚಾಲನೆ ನೀಡಲು ದಿನಾಂಕ ನಿಗದಿಯಾಗಿತ್ತು. ಚಾಲನೆ ನೀಡಿದ ನಂತರ ರೈಲು ಓಡಾಟ ಯಾವುದೇ ಅಡ್ಡಿ ಇಲ್ಲದೆ ನಡೆಯಬೇಕು ಎಂಬ ಉದ್ದೇಶದಿಂದ ದಿನಾಂಕ ಮುಂದೂಡಲಾಗಿದೆ. ಮೇ 10ರ ನಂತರ ಒಂದೆರಡು ದಿನಗಳಲ್ಲಿ ಕಾರ್ಯಕ್ರಮ ನಡೆಯಲಿದೆ.

ಕಾರ್ಯಕ್ರಮದ ವೇದಿಕೆ, ಬರುವ ಜನರಿಗೆ ಕುಳಿತುಕೊಳ್ಳಲು ವ್ಯವಸ್ಥೆ ಇತರ ತಯಾರಿಕೆ ಸ್ಥಳ ಪರಿಶೀಲಿಸಲಾಗುತ್ತಿದೆ. ಪಟ್ಟಣದಿಂದ ಹುಬ್ಬಳ್ಳಿಗೆ ದಿನದಲ್ಲಿ ಎರಡು ಬಾರಿ ರೈಲು ಸಂಚರಿಸಲಿದೆ ಎಂದು ತಿಳಿಸಿದರು. ರೈಲ್ವೆ ಇಲಾಖೆ ಎಇಇ ಅಶೋಕ ಮುದಿಗೌಡರ್, ಪ್ರಮುಖರಾದ ಅಶೋಕ ಬಳೂಟಗಿ, ಉಮೇಶ ಯಾದವ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net