ದೈನಂದಿನ ರೈಲು ಸಂಚಾರ ಆರಂಭ

train service begins daily
ಕುಷ್ಟಗಿಯ ರೈಲು ನಿಲ್ದಾಣದಿಂದ ಶನಿವಾರ ಬೆಳಗ್ಗೆ ದೈನಂದಿನ ರೈಲು ಸಂಚಾರ ಆರಂಭಗೊಂಡಿತು.
Published on

ಕುಷ್ಟಗಿ: ಕುಷ್ಟಗಿ-ಹುಬ್ಬಳ್ಳಿ ರೈಲಿನ ದೈನಂದಿನ ಸಂಚಾರ ಶನಿವಾರದಿಂದ ಆರಂಭಗೊಂಡಿತು. ಶುಕ್ರವಾರ ಸಂಜೆ 5ಕ್ಕೆ ಹುಬ್ಬಳ್ಳಿಯ ಸಿದ್ಧಾರೂಢ ಸ್ವಾಮೀಜಿ ರೈಲು ನಿಲ್ದಾಣದಿಂದ ಬಂದು ತಂಗಿದ್ದ ರೈಲು, ಬೆಳಗ್ಗೆ 7ಕ್ಕೆ ಪಟ್ಟಣದ ನಿಲ್ದಾಣದಿಂದ ನಿರ್ಗಮಿಸುವ ಮೂಲಕ ಸಂಚಾರ ಆರಂಭಿಸಿತು

ಬೆಳಗ್ಗೆ ಸಂಚರಿಸುವ ರೈಲು 10.40ಕ್ಕೆ ಹುಬ್ಬಳ್ಳಿ ತಲುಪಲಿದೆ. ಸಂಜೆ 5ಕ್ಕೆ ಅಲ್ಲಿಂದ ನಿರ್ಗಮಿಸಿ ರಾತ್ರಿ 8.40ಕ್ಕೆ ಪಟ್ಟಣ ತಲುಪಲಿದೆ. ಬೆಳಗಿನ ಸಂಚಾರಕ್ಕೆ ಒಟ್ಟು 109 ಪ್ರಯಾಣಿಕರು ವಿವಿಧ ನಿಲ್ದಾಣಗಳಿಗೆ ಟಿಕೆಟ್ ಪಡೆದರು ಎಂದು ಸ್ಟೇಷನ್ ಮಾಸ್ಟರ್ ಅಮಿತ್ ಕುಮಾರ್ ಗುಪ್ತಾ ತಿಳಿಸಿದರು.

ನಿಲ್ದಾಣಕ್ಕೆ ಬರುವ ಸಾರ್ವಜನಿಕರು ಸ್ವಚ್ಛತೆ ಕಾಪಾಡಬೇಕಿದೆ. ಸುರಕ್ಷತೆ ದೃಷ್ಟಿಯಿಂದ ಬೈಕ್ ಓಡಾಡಿಸುವುದನ್ನು ನಿಲ್ಲಿಸಬೇಕು. ವಿನಾಕಾರಣ ರೈಲಿನ ಚೈನ್ ಎಳೆಯುವುದನ್ನು ನಿಲ್ಲಿಸಬೇಕು. ಜತೆಗೆ ಸಿಬ್ಬಂದಿಯೊಂದಿಗೆ ಸಂಯಮದಿಂದ ವರ್ತಿಸಿ ಸಹಕರಿಸಬೇಕಿದೆ ಎಂದು ರೈಲ್ವೆ ಇಲಾಖೆ ಅಧಿಕಾರಿಗಳು ಮನವಿ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net