ಬಿಸಿಯೂಟದ ಆಹಾರ ಧಾನ್ಯ ಮನೆಬಾಗಿಲಿಗೆ ತಲುಪಿಸಿ

191120 Kushtagi SFI Appeal
ಬಿಸಿಯೂಟದ ಆಹಾರ ಧಾನ್ಯವನ್ನು ವಿದ್ಯಾರ್ಥಿಗಳಿಗೆ ವಿತರಣೆ ಮಾಡುವಂತೆ ಒತ್ತಾಯಿಸಿ ಭಾರತ ವಿದ್ಯಾರ್ಥಿ ಒಕ್ಕೂಟ(ಎಸ್‌ಎಫ್‌ಐ)ದ ಪದಾಧಿಕಾರಿಗಳು ಅಕ್ಷರ ದಾಸೋಹ ಅಧಿಕಾರಿ ಶರಣಪ್ಪಗೆ ಬುಧವಾರ ಮನವಿ ಸಲ್ಲಿಸಿದರು.
Published on

ಕುಷ್ಟಗಿ: ಬಿಸಿಯೂಟದ ಆಹಾರ ಧಾನ್ಯವನ್ನು ವಿದ್ಯಾರ್ಥಿಗಳಿಗೆ ವಿತರಣೆ ಮಾಡುವಂತೆ ಒತ್ತಾಯಿಸಿ ಭಾರತ ವಿದ್ಯಾರ್ಥಿ ಒಕ್ಕೂಟ(ಎಸ್‌ಎಫ್‌ಐ)ದ ಪದಾಧಿಕಾರಿಗಳು ಅಕ್ಷರ ದಾಸೋಹ ಅಧಿಕಾರಿ ಶರಣಪ್ಪಗೆ ಬುಧವಾರ ಮನವಿ ಸಲ್ಲಿಸಿದರು.

ಶಾಲೆ ಆರಂಭವಾಗದ ಹಿನ್ನೆಲೆಯಲ್ಲಿ ಬಿಸಿಯೂಟದ ಆಹಾರ ಧನ್ಯ ಆಯಾ ಜಿಲ್ಲೆಯ ಗೋದಾಮಿನಲ್ಲಿ ಕೊಳೆಯುತ್ತಿದೆ. ಆಹಾರ ಧಾನ್ಯವನ್ನು ಮಕ್ಕಳ ಮನೆ ಬಾಗಿಲಿಗೆ ತಲುಪಿಸಬೇಕೆಂಬ ಸರ್ಕಾರದ ಆದೇಶ ತಾಲೂಕಿನಲ್ಲಿ ಪಾಲನೆಯಾಗುತ್ತಿಲ್ಲ. ಆಹಾರ ಧಾನ್ಯವನ್ನು ವಿದ್ಯಾರ್ಥಿಗಳ ಮನೆ ಬಾಗಿಲಿಗೆ ತಲುಪಿಸಲು ಇನ್ನೆರಡು ದಿನಗಳಲ್ಲಿ ಕ್ರಮ ಕೈಗೊಳ್ಳದಿದ್ದಲ್ಲಿ ಬಿಇಒ ಕಚೇರಿ ಎದುರು ಪ್ರತಿಭಟಿಸಬೇಕಾಗುತ್ತದೆ ಎಂದು ಎಚ್ಚರಿಸಿದರು. ಒಕ್ಕೂಟದ ರಾಜ್ಯ ಅಧ್ಯಕ್ಷ ಅಮರೇಶ ಕಡಗದ್, ತಾಲೂಕು ಸಂಚಾಲಕ ಬಸವರಾಜ ಸಾರಥಿ, ಜಿಲ್ಲಾ ಸಮಿತಿ ಸದಸ್ಯ ವೀರೇಶ ಹಿರೇಮಠ, ಪದಾಧಿಕಾರಿಗಳಾದ ಯಮನೂರ ಕೋರಿ, ಪ್ರವೀಣ ರಾಯಬಾಗ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net