ಶಾಲಾಪೂರ್ವ ಶಿಕ್ಷಣದ ಬಲವರ್ಧನೆಗೆ ಆದ್ಯತೆ

Untitled design(7)
Published on

ಕುಷ್ಟಗಿ: ಮಕ್ಕಳ ದೈಹಿಕ, ಮಾನಸಿಕ ಹಾಗೂ ಬೌದ್ಧಿಕ ಬೆಳವಣಿಗೆಗೆ ಶಾಲಾ ಪೂರ್ವ ಶಿಕ್ಷಣದ ಅಗತ್ಯ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಪಿ.ವೈ.ಶೆಟ್ಟೆಪ್ಪನವರ್ ಹೇಳಿದರು.

ತಾಲೂಕಿನ ಹಿರೇಮನ್ನಾಪುರದ ಶರಣಬಸವೇಶ್ವರ ಸಮುದಾಯ ಭವನದಲ್ಲಿ ಸೋಮವಾರ ಜಿಲ್ಲಾಡಳಿತ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕಕ ಪ್ರದೇಶಾಭಿವೃದ್ಧಿ ಮಂಡಳಿ ಹಾಗೂ ಟಾಟಾ ಕಲಿಕಾ ಟ್ರಸ್ಟ್ ಸಹಯೋಗದಲ್ಲಿ ಶಾಲಾ ಪೂರ್ವ ಶಿಕ್ಷಣ ಬಲವರ್ಧನೆಗೆ ಏರ್ಪಡಿಸಿದ್ದ ಬಾಲಮೇಳದಲ್ಲಿ ಮಾತನಾಡಿದರು.

ಅಂಗನವಾಡಿ ಕೇಂದ್ರಗಳಿಗೆ ದಾಖಲಾಗುವ ಮಕ್ಕಳಿಗೆ ಪೌಷ್ಟಿಕ ಆಹಾರದ ಜತೆಗೆ ಮಾನಸಿಕ ಹಾಗೂ ಬೌದ್ಧಿಕ ಬೆಳವಣಿಗೆಗೆ ಪೂರಕ ಕಾರ್ಯಕ್ರಮ ರೂಪಿಸಲಾಗಿದೆ. ಸದ್ಯ ಬಾಲ ಮೇಳ ಆಯೋಜಿಸುವ ಮೂಲಕ ಶಾಲಾಪೂರ್ವ ಶಿಕ್ಷಣದ ಬಲವರ್ಧನೆಗೆ ಸರ್ಕಾರ ಮುಂದಾಗಿದೆ ಎಂದರು.

ಗ್ರಾಪಂ ಅಧ್ಯಕ್ಷೆ ಅಕ್ಕಮಹಾದೇವಿ ಪೊಲೀಸ್ ಪಾಟೀಲ್, ಉಪಾಧ್ಯಕ್ಷ ಪ್ಯಾಟೆಪ್ಪ ಸೂಡಿ, ಸದಸ್ಯ ಶರಣು ಬ್ಯಾಳಿ, ಪಿಡಿಒ ಅಂಬುಜಾ ಪಾಟೀಲ್, ಸಿಡಿಪಿಒ ಯಲ್ಲಮ್ಮ ಹಂಡಿ, ಟಾಟಾ ಟ್ರಸ್ಟ್‌ನ ಜಿಲ್ಲಾ ವ್ಯವಸ್ಥಾಪಕ ಅಶೋಕ್, ಜಿಲ್ಲಾ ಸಂಪನ್ಮೂಲ ವ್ಯಕ್ತಿ ಸಿದ್ದಪ್ಪ ಕುರಿ, ಅಂಗನವಾಡಿ ಮೇಲ್ವಿಚಾರಕಿಯರಾದ ಅನ್ನಪೂರ್ಣ ಪಾಟೀಲ್, ನಾಗಮ್ಮ ಗುಂಡೂರು, ಕಾರ್ಯಕರ್ತೆಯರಾದ ಗೀತಾ ಕುಷ್ಟಗಿ, ಗಿರಿಜಾ ಹಿರೇಮಠ, ಶಶಿಕಲಾ ಹಸಬಿ, ಮೆಹಬೂಬಿ ಕುಷ್ಟಗಿ, ಸೋಮವ್ವ ಡೊಳ್ಳಿನ್, ಶಕುಂತಲಾ ನರಸಾಪುರ, ಶಾಂತಾ ಪ್ರಧಾನಿ ಸೇರಿ ಸಹಾಯಕಿಯರು ಇದ್ದರು. ಮಕ್ಕಳ ಪಾಲಕರಿಗೆ ಮ್ಯೂಸಿಕಲ್ ಚೇರ್ ಆಡಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net