ಗುರುಬಳಗದ ಸೇವೆ ಶ್ಲಾಘನಾರ್ಹ

WALL WRITING
ಕುಷ್ಟಗಿ ತಾಲೂಕಿನ ಹಿರೇನಂದಿಹಾಳ ಸರ್ಕಾರಿ ಪ್ರೌಢ ಶಾಲೆಯಲ್ಲಿ ಯಲಬುರ್ಗಾ-ಕುಕನೂರು ತಾಲೂಕಿನ ವಿಶ್ವ ಬಂಧು ಗುರುಬಳಗದಿಂದ ನಡೆದ ಗೋಡೆ ಬರಹ ಸೇವೆಯಲ್ಲಿ ಕಾಶಿನಾಥ ಮಿಸ್ಕಿನ್, ಕೊಟ್ರೇಶ ಪಟ್ಟಣ, ಶಂಕರಗೌಡ ಮುದಿಗೌಡ್ರ, ಸಂಗಯ್ಯ ಹಿರೇಮಠ, ಪರಮೇಶ ಚಿಂತಾಮಣಿ, ಮರ್ತುಜಾಸಾಬ್ ಮುಜಾವರ ತೊಡಗಿದ್ದರು.
Published on

ಕುಷ್ಟಗಿ: ವಿನೂತನ ಚಟುವಟಿಕೆಗಳ ಮೂಲಕ ಶೈಕ್ಷಣಿಕ, ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ವಿಶ್ವ ಬಂಧು ಗುರುಬಳಗದ ಕಾರ್ಯ ಶ್ಲಾಘನೀಯ ಎಂದು ಪ್ರಭಾರ ಮುಖ್ಯಶಿಕ್ಷಕ ಪ್ರಕಾಶ ಮ್ಯಾಗೇರಿ ಮೆಚ್ಚುಗೆ ವ್ಯಕ್ತಪಡಿಸಿದರು.

ತಾಲೂಕಿನ ಹಿರೇನಂದಿಹಾಳ ಸರ್ಕಾರಿ ಪ್ರೌಢಶಾಲೆಯಲ್ಲಿ ಯಲಬುರ್ಗಾ-ಕುಕನೂರು ತಾಲೂಕಿನ ವಿಶ್ವ ಬಂಧು ಗುರುಬಳಗದಿಂದ ಭಾನುವಾರ ಹಮ್ಮಿಕೊಂಡಿದ್ದ ಗೋಡೆ ಬರಹ ಕಾರ್ಯಕ್ರಮದಲ್ಲಿ ಮಾತನಾಡಿದರು. ಗೋಡೆ ಬರಹದಿಂದ ಶಾಲೆ ಆಕರ್ಷಣೀಯವಾಗಿ ಕಾಣುವ ಜತೆಗೆ ಗುಣಾತ್ಮಕ ಶಿಕ್ಷಣಕ್ಕೆ ಪೂರಕವಾಗುತ್ತದೆ ಎಂದರು.

ಗುರುಬಳಗದ ಮುಖ್ಯಸ್ಥ ಸಿದ್ದಲಿಂಗಪ್ಪ ಶ್ಯಾಗೋಟಿ ಮಾತನಾಡಿ, ಸಮರ್ಪಣಾ ಮನೋಭಾವದ ತಂಡ ಅತ್ಯಂತ ಕ್ರಿಯಾಶೀಲವಾಗಿ ಕಾರ್ಯ ನಿರ್ವಹಿಸುತ್ತಿರುವುದರಿಂದ ಹಲವಾರು ಕಾರ್ಯಕ್ರಮ ಆಯೋಜಿಸಲು ಸಾಧ್ಯವಾಗಿದೆ ಎಂದರು.

ಗೋಡೆ ಬರಹ ಸೇವಾ ಕಾರ್ಯದಲ್ಲಿ ಕಾಶಿನಾಥ ಮಿಸ್ಕಿನ್, ಕೊಟ್ರೇಶ ಪಟ್ಟಣ, ಶಂಕರಗೌಡ ಮುದಿಗೌಡ್ರ, ಸಂಗಯ್ಯ ಹಿರೇಮಠ, ಪರಮೇಶ ಚಿಂತಾಮಣಿ, ಮರ್ತುಜಾಸಾಬ್ ಮುಜಾವರ, ಅನ್ವರ ಹುಸೇನ್, ರಾಜ್‌ಮಹ್ಮದ್ ಬಾಳಿಕಾಯಿ, ಮರ್ದಾನ್‌ಸಾಬ್ ನದಾಫ್, ರೇವಪ್ಪ ಕುರಬಾನಿ, ಮೆಹಬೂಬ್ ಬಾದಶಹ, ವೆಂಕಟೇಶ ಚಾಗಿ, ಪಂಚಾಕ್ಷರಿ ಪೂಜಾರಿ ತೊಡಗಿದ್ದರು. ಎಸ್ಡಿಎಂಸಿ ಅಧ್ಯಕ್ಷ ಫಕೀರಪ್ಪ ಮ್ಯಾಗಳಮನಿ, ಉಪಾಧ್ಯಕ್ಷ ಶರಣಪ್ಪ ಬೇವಿನಕಟ್ಟಿ, ಪ್ರಮುಖರಾದ ಸಂಗಪ್ಪ ಗಾಳಿ, ಶರಣಪ್ಪ ರಾಂಪುರ, ಬಂಡಿ ಕೆಪಿಎಸ್ ಶಾಲೆಯ ಉಪಪ್ರಾಚಾರ್ಯ ಶಿವಯೋಗಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net