ಟಾಟಾ ಏಸ್‌ಗೆ ಲಾರಿ ಡಿಕ್ಕಿಯಾಗಿ 18 ಜನರಿಗೆ ಗಾಯ

Accident
Published on

ಕುಷ್ಟಗಿ: ಪಟ್ಟಣ ಹೊರವಲಯದ ಚತುಷ್ಪತ ರಾಷ್ಟ್ರೀಯ ಹೆದ್ದಾರಿಯ ಪುಟಗಮರಿ ಕ್ರಾಸ್ ಬಳಿ ಶುಕ್ರವಾರ ಬೆಳಗಿನ ಜಾವ ಹಿಂಬದಿಯಿಂದ ಲಾರಿ ಡಿಕ್ಕಿ ಹೊಡೆದಿದ್ದರಿಂದ ಟಾಟಾ ಏಸ್ ಗೂಡ್ಸ್ ವಾಹನದಲ್ಲಿದ್ದ ಇಬ್ಬರು ಕಾಲು ತುಂಡಾಗಿದ್ದು, 16 ಜನ ಗಾಯಗೊಂಡಿದ್ದಾರೆ. ತಾಲೂಕಿನ ಗುಡ್ಡದ ದೇವಲಾಪುರ ಗ್ರಾಮದ ಯಂಕಪ್ಪ ಹರಿಜನ ಹಾಗೂ ದುರುಗಪ್ಪ ಹರಿಜನ ಕಾಲುಗಳು ತುಂಡಾಗಿವೆ. ಅವರನ್ನು ಚಿಕಿತ್ಸೆಗೆ ಬಾಗಲಕೋಟೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಂಭೀರ ಗಾಯಗೊಂಡ 8 ಜನರಿಗೆ ಸ್ಥಳೀಯ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಉಳಿದವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ತಾಲೂಕಿನ ಗುಡ್ಡದ ದೇವಲಾಪುರ ಗ್ರಾಮದಿಂದ ಹುಲಿಗಿಯ ಹುಲಿಗೆಮ್ಮ ದೇವಿ ದರ್ಶನಕ್ಕೆ ತೆರಳುತಿರುವಾಗ ದುರ್ಘಟನೆ ನಡೆದಿದೆ. ಬೇವೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net