ಗಮನ ಸೆಳೆದ ಚಿಣ್ಣರ ವಸ್ತು ಪ್ರದರ್ಶನ

Exhibition of Old Household Items
ಕುಷ್ಟಗಿಯ ಗಾಂಧಿನಗರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಹಳೆಯ ಗೃಹೋಪಯೋಗಿ ವಸ್ತುಗಳ ಪ್ರದರ್ಶನ ಏರ್ಪಡಿಸಲಾಗಿತ್ತು. ದೈಹಿಕ ಶಿಕ್ಷಣ ಪರಿವೀಕ್ಷಕಿ ಸರಸ್ವತಿ, ಬಿಆರ್‌ಪಿಗಳಾದ ಜೀವನಸಾಬ ಬಿನ್ನಾಳ, ಶರಣಪ್ಪ ತೆಮ್ಮಿನಾಳ ಇತರರು ವೀಕ್ಷಿಸಿದರು.
Published on

ಕುಷ್ಟಗಿ: ಪಟ್ಟಣದ ಗಾಂಧಿನಗರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಹಳೆಯ ಗೃಹೋಪಯೋಗಿ ವಸ್ತುಗಳ ಪ್ರದರ್ಶನ ಶನಿವಾರ ಏರ್ಪಡಿಸಲಾಗಿತ್ತು. ಶಾಲೆಯ 3ನೇ ತರಗತಿ ವಿದ್ಯಾರ್ಥಿಗಳು ಮನೆಯಿಂದ ತಂದಿದ್ದ ವಸ್ತುಗಳನ್ನು ಪ್ರದರ್ಶಿಸಿದರು.

3ನೇ ತರಗತಿಯ ಪಠ್ಯ ವಿಷಯದ ‘ಅಂದು ಇಂದು’ ಪಾಠವನ್ನು ವಸ್ತು ಪ್ರದರ್ಶನದ ಚಟುವಟಿಕೆ ಮೂಲಕ ಬೋಧಿಸಲಾಯಿತು. ಮಣ್ಣಿನಿಂದ ತಯಾರಿಸಿದ ಒಲೆ, ಮಡಕೆ, ಕುಡಿಕೆ, ಗಡಗಿ, ತಾಮ್ರ ಹಾಗೂ ಹಿತ್ತಾಳೆ ಪಾತ್ರೆಗಳು, ಧಾನ್ಯ ಅಳತೆ ಮಾಡುವ ಪಾವು, ಸೇರು, ಬೀಸುವ ಕಲ್ಲು, ಬಿದಿರಿನಿಂದ ತಯಾರಿಸಿದ ಬುಟ್ಟಿ, ಮೊರ, ಕಬ್ಬಿಣದ ವಸ್ತುಗಳಾದ ಹೆಂಚು, ಚುಚ್ಚಗ ಹೀಗೆ ಯಂತ್ರಗಳ ಭರಾಟೆಗೆ ಮೂಲೆಗುಂಪಾಗಿದ್ದ ವಸ್ತುಗಳೆಲ್ಲವನ್ನೂ ಪ್ರದರ್ಶನಕ್ಕಿಟ್ಟದ್ದು ಕಂಡು ಬಂತು.

ಶಾಲೆಯ ಮುಖ್ಯಶಿಕ್ಷಕಿ ಅನ್ನಪೂರ್ಣಾ ತಾಳಕೇರಿ, ಶಿಕ್ಷಕರಾದ ಜಹಾನ್ ಆರಾ ಕೋಳೂರು, ಮಂಜುಳಾ ಮಕ್ಕಳಿಗೆ ಮಾರ್ಗದರ್ಶನ ಮಾಡಿದರು. ದೈಹಿಕ ಶಿಕ್ಷಣ ಪರಿವೀಕ್ಷಕಿ ಸರಸ್ವತಿ, ಬಿಆರ್‌ಪಿಗಳಾದ ಜೀವನಸಾಬ ಬಿನ್ನಾಳ, ಶರಣಪ್ಪ ತೆಮ್ಮಿನಾಳ, ಪ್ರಮುಖರಾದ ತಾಜುದ್ದೀನ್ ದಳಪತಿ, ಸುಖರಾಜ ತಾಳಕೇರಿ, ಸಹಿಪ್ರಾ ಶಾಲೆಯ ಮುಖ್ಯ ಶಿಕ್ಷಕಿ ರತ್ನಮ್ಮ ವಸ್ತು ಪ್ರದರ್ಶನ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net