ಸರ್ಕಾರ ಸೌಲಭ್ಯಗಳ ಗುರಿಯನ್ನು ಹೆಚ್ಚಿಸಲಿ

060822 Kushtagi MLA Handy capts vechicle
ಕುಷ್ಟಗಿಯ ಶಾಸಕರ ಕಚೇರಿಯಲ್ಲಿ ಶಾಸಕ ಅಮರೇಗೌಡ ಪಾಟೀಲ್ ಬಯ್ಯಪುರ ಅಂಗವಿಕಲರಿಗೆ ಶನಿವಾರ ತ್ರಿಚಕ್ರ ವಾಹನ ವಿತರಿಸಿದರು.
Published on

ಕುಷ್ಟಗಿ: ಅಂಗವಿಕಲರಿಗೆ ನೀಡುವ ಸೌಲಭ್ಯಗಳ ಗುರಿಯನ್ನು ಸರ್ಕಾರ ಹೆಚ್ಚಿಸಬೇಕಿದೆ ಎಂದು ಶಾಸಕ ಅಮರೇಗೌಡ ಪಾಟೀಲ್ ಬಯ್ಯಪುರ ಹೇಳಿದರು.

ಶಾಸಕರ ಕಚೇರಿ ಆವರಣದಲ್ಲಿ ಅಂಗವಿಕಲರಿಗೆ ತ್ರಿಚಕ್ರ ವಾಹನ ವಿತರಿಸಿ ಶನಿವಾರ ಮಾತನಾಡಿದರು. ಅರ್ಹ ಅಂಗವಿಕಲರಿಗೆ ತ್ರಿಚಕ್ರ ವಾಹನಗಳನ್ನು ಪ್ರತಿ ವರ್ಷ 25ರಂತೆ ಹೆಚ್ಚಿಸಿ ವಿತರಿಸಬೇಕು. ವಿತರಿಸಲಾದ ವಾಹನಗಳನ್ನು ಅಗತ್ಯ ಕೆಲಸಕ್ಕೆ ಬಳಕೆ ಮಾಡಿ ಹೆಚ್ಚು ಕಾಲ ಬಾಳಿಕೆ ಬರುವಂತೆ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಪುರಸಭೆ ಮಾಜಿ ಸದಸ್ಯ ಚಂದ್ರಶೇಖರ ಹಿರೇಮನಿ, ಪ್ರಮುಖರಾದ ಹನುಮೇಶ ಗುಮಗೇರಾ, ಯಮನೂರ ಸಂಗಟಿ, ವೆಂಕಟೇಶ ಇಂಗಳಗಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net