ಕದಿಯಲು ಬಂದು ಬೈಕ್ ಬಿಟ್ಟು ಪರಾರಿ!

BIKE
ಕುಷ್ಟಗಿ ತಾಲೂಕಿನ ಕೆ.ಬೋದೂರು ಹೊರವಲಯದ ಜಮೀನಿನಲ್ಲಿ ಬೈಕ್ ಹಾಗೂ ಕದ್ದ ದಾಳಿಂಬೆ ಹಣ್ಣುಗಳಿದ್ದ ಚೀಲಗಳನ್ನು ಕಳ್ಳರು ಬಿಟ್ಟು ಹೋಗಿರುವುದು.
Published on

ಕುಷ್ಟಗಿ: ತೋಟದಲ್ಲಿ ದಾಳಿಂಬೆ ಕದಿಯಲು ಬಂದ ಕಳ್ಳರು ತಾವು ತಂದಿದ್ದ ಬೈಕ್ ಹಾಗೂ ಕದ್ದ ದಾಳಿಂಬೆ ಹಣ್ಣುಗಳಿದ್ದ ಚೀಲಗಳನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾದ್ದಾರೆ.

ತಾಲೂಕಿನ ಕೆ.ಬೋದೂರು ಹೊರವಲಯದ ತೋಟದಲ್ಲಿ ಬುಧವಾರ ಬೆಳಗಿನ ಜಾವ ಘಟನೆ ನಡೆದೆ. ಬೆಳಗ್ಗೆ ತೋಟಕ್ಕೆ ತೆರಳಿದ ತೋಟದ ಮಾಲೀಕ ರಾಜು ಪುರಾಣಿಕಮಠ ಅವರು ಅಪರಿಚಿತ ಬೈಕ್ ಹಾಗೂ ಚೀಲದಲ್ಲಿ ತುಂಬಿಟ್ಟಿದ್ದ ದಾಳಿಂಬೆ ಹಣ್ಣುಗಳನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಬೈಕ್ ವಶಪಡಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಪಕ್ಕದ ಜಮೀನಿನವರು ಬೆಳಗಿನ ಜಾವ ಅದೇ ಮಾರ್ಗವಾಗಿ ಓಡಾಡುವುದರಿಂದ ಅವರನ್ನೇ ಮಾಲೀಕರೆಂದು ತಿಳಿದು ಕಳ್ಳರು ಪರಾರಿಯಾಗಿರಬಹುದೆಂದು ತೋಟದ ಮಾಲೀಕ ರಾಜು ಸಹೋದರ ಕುಮಾರ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net