ಏಕದಂತನಿಗೆ ಅದ್ದೂರಿ ಸ್ವಾಗತ

Ganesh Chaturthi
ಕುಷ್ಟಗಿಯಲ್ಲಿ ಗಣೇಶ ಚತುರ್ಥಿ ನಿಮಿತ್ತ ವಿವಿಧ ವಾದ್ಯ ವೃಂದದೊಂದಿಗೆ ಗಣೇಶ ಮೂರ್ತಿಯನ್ನು ಮೆರವಣಿಗೆ ಮೂಲಕ ಕರೆದೊಯ್ದು ಪ್ರತಿಷ್ಠಾಪಿಸಲಾಯಿತು.
Published on

ಕುಷ್ಟಗಿ: ಪಟ್ಟಣ ಸೇರಿದಂತೆ ತಾಲೂಕಿನ ವಿವಿಧೆಡೆ ಗಣೇಶ ಚತುರ್ಥಿಯನ್ನು ಭಕ್ತಿ-ಭಾವದೊಂದಿಗೆ ಸಡಗರದಿಂದ ಆಚರಿಸಲಾಯಿತು.

ಸಾರ್ವಜನಿಕ ಸ್ಥಳ ಸೇರಿ ವಿವಿಧ ಶಾಲೆ-ಕಾಲೇಜು, ಮನೆಗಳಲ್ಲಿ ವಿಘ್ನ ನಿವಾರಕನ ಮೂರ್ತಿ ಪ್ರತಿಸ್ಥಾಪಿಸಿ ಪೂಜೆ ಸಲ್ಲಿಸಲಾಯಿತು. ಚಿಕ್ಕ ಗಾತ್ರದ ಮೂರ್ತಿಗಳನ್ನು ತಲೆ ಮೇಲೆ ಹೊತ್ತು ಕೊಂಡೊಯ್ದರೆ ದೊಡ್ಡ ಗಾತ್ರದ ಮೂರ್ತಿಗಳನ್ನು ಟ್ರ್ಯಾಕ್ಟರ್, ವಿವಿಧ ಗೂಡ್ಸ್ ವಾಹನಗಳಲ್ಲಿ ಮೆರವಣಿಗೆ ಮೂಲಕ ಕರೆದೊಯ್ದು ಪೂಜೆ ಸಲ್ಲಿಸಿ ಪ್ರತಿಷ್ಠಾಪಿಸಿದ್ದು ಕಂಡುಬಂತು.

ವಿವಿಧ ವಾದ್ಯ ವೃಂದದೊಂದಿಗೆ ಪಟಾಕಿ ಸಿಡಿಸುತ್ತ ಗಣಪತಿ ಬಪ್ಪಾ ಮೋರಯಾ ಎಂಬ ಜಯಘೋಷದೊಂದಿಗೆ ಮೂಷಕವಾಹನನ್ನು ಸ್ವಾಗತಿಸಲಾಯಿತು. ಪಟ್ಟಣದ ಎಪಿಎಂಸಿ, ಹಳೇ ಬಜಾರ್, ಬಸ್ ನಿಲ್ದಾಣ, ಜೆಸ್ಕಾಂ ಉಪ ವಿಭಾಗ ಕಚೇರಿ, ಬುತ್ತಿ ಬಸವೇಶ್ವರ ದೇವಸ್ಥಾನ ಆವರಣ ಸೇರಿದಂತೆ ಪ್ರಮುಖ ರಸ್ತೆಗಳ ಅಕ್ಕ ಪಕ್ಕದಲ್ಲಿ ವಿವಿಧ ಆಕೃತಿ ಹಾಗೂ ಭಂಗಿಯಲ್ಲಿರುವ ದೊಡ್ಡ ದೊಡ್ಡ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ.

ಮನೆಗಳಲ್ಲಿ ಪ್ರತಿಷ್ಠಾಪಿಸಿರುವ ಬಹುತೇಕ ಗಣೇಶ ಮೂರ್ತಿಗಳನ್ನು ಸಂಜೆಯೇ ವಿಸರ್ಜಿಸಲಾಯಿತು. ಸಾರ್ವಜನಿಕ ಸ್ಥಳಗಲ್ಲಿ ಪ್ರತಿಷ್ಠಾಪಿಸಿರುವ ಮೂರ್ತಿಗಳನ್ನು 5ನೇ ಹಾಗೂ 11ನೇ ದಿನಕ್ಕೆ ವಿಸರ್ಜಿಸಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net