ಪ್ರಜಾತಂತ್ರದ ಹಬ್ಬದಲ್ಲಿ ಖುಷಿಯಿಂದ ಪಾಲ್ಗೊಳ್ಳಿ

MATADANA-JAGRUTHI
ಗುಮಗೇರಾ ಗ್ರಾಮದಲ್ಲಿ ಪ್ರತಿ ಮನೆಗೆ ತೆರಳಿ ಗುಲಾಬಿ ಹೂ ನೀಡುವ ಮೂಲಕ ಕಡ್ಡಾಯ ಮತದಾನ ಕುರಿತು ಜಾಗೃತಿ ಮೂಡಿಸಲಾಯಿತು. ನರೇಗಾ ಸಹಾಯಕ ನಿರ್ದೇಶಕ ನಿಂಗನಗೌಡ ಹಿರೇಹಾಳ, ಪಿಡಿಒ ಮಲ್ಲಪ್ಪ ಕುಂಬಾರ್, ಸಾಮಾಜಿಕ ಲೆಕ್ಕ ಪರಿಶೋಧಕ ರವಿ ಗೌಡರ್, ಐಇಸಿ ಸಂಯೋಜಕ ಚಂದ್ರಶೇಖರ ಹಿರೇಮಠ ಇತರರಿದ್ದರು.
Published on

ಕುಷ್ಟಗಿ: ಚುನಾವಣೆ ಪ್ರಜಾತಂತ್ರದ ಹಬ್ಬವಾಗಿದೆ. ಅರ್ಹ ಮತದಾರರೆಲ್ಲ ಮೇ 10ರಂದು ಖುಷಿಯಿಂದ ಪಾಲ್ಗೊಂಡು ಹಕ್ಕು ಚಲಾಯಿಸಬೇಕು ಎಂದು ನರೇಗಾ ಸಹಾಯಕ ನಿರ್ದೇಶಕ ನಿಂಗನಗೌಡ ಹಿರೇಹಾಳ ಹೇಳಿದರು.

ಗುಮಗೇರಾ ಗ್ರಾಮದಲ್ಲಿ ಸೋಮವಾರ ಏರ್ಪಡಿಸಿದ್ದ ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಮರ್ಥ ನಾಯಕರ ಆಯ್ಕೆಗಾಗಿ ನಡೆಯುವ ಚುನಾವಣೆ ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸುವ ಪ್ರಕ್ರಿಯೆಯಾಗಿದೆ. ಉದಾಸೀನ ತೋರದೆ ಕಡ್ಡಾಯವಾಗಿ ಮತದಾನ ಮಾಡಬೇಕು ಎಂದರು.

ಗುಲಾಬಿ ಹೂ ನೀಡಿ ಜಾಗೃತಿ

ಗ್ರಾಮದ ಪ್ರಮುಖ ಬೀದಿಗಳಲ್ಲಿ ಪಂಜಿನ ಮೆರವಣಿಗೆ ಮೂಲಕ ಜಾಗೃತಿ ಮೂಡಿಸಲಾಯಿತು. ಮನೆ ಮನೆಗೆ ಭೇಟಿ ನೀಡಿ ಗುಲಾಬಿ ಹೂ ನೀಡಿ ಕಡ್ಡಾಯ ಮತದಾನ ಮಾಡುವಂತೆ ಗ್ರಾಮಸ್ಥರಿಗೆ ಮನವರಿಕೆ ಮಾಡಲಾಯಿತು.

ತಾಪಂ ಸಾಮಾಜಿಕ ಲೆಕ್ಕ ಪರಿಶೋಧಕ ರವಿ ಗೌಡರ್, ಪಿಡಿಒ ಮಲ್ಲಪ್ಪ ಕುಂಬಾರ್, ಐಇಸಿ ಸಂಯೋಜಕ ಚಂದ್ರಶೇಖರ ಹಿರೇಮಠ, ಗ್ರಾಪಂ ಸಿಬ್ಬಂದಿ ವಿರೂಪಾಕ್ಷಪ್ಪ, ಹನುಮಂತ, ಲಕ್ಷ್ಮೀದೇವಿ, ಕಲಾವಿದ ಸುಖಮುನಿ ಗಡಗಿ, ಸಂಜೀವಿನಿ ಸ್ವಸಹಾಯ ಸಂಘದ ಸದಸ್ಯರಾದ ಹನುಮಕ್ಕ, ಸುಮಾ, ನಿರ್ಮಲಾ, ಕಸ್ತೂರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net