ಅಹೋರಾತ್ರಿ ಭಜನೆ, ನಿತ್ಯ ಅನ್ನದಾಸೋಹ

Untitled design (3)
ಕುಷ್ಟಗಿಯ ಗ್ರಾಮದೇವತೆ ದ್ಯಾಮವ್ವ ದೇವಿ ಜಾತ್ರೆಯ ಅನ್ನದಾಸೋಹಕ್ಕೆ ವಯೋವೃದ್ಧರೂ ಸೇರಿ ಮಹಿಳೆಯರು ತರಕಾರಿ ಕತ್ತರಿಸುವ ಕಾರ್ಯದಲ್ಲಿ ಶನಿವಾರ ತೊಡಗಿಕೊಂಡಿದ್ದರು.
Published on

ಕುಷ್ಟಗಿ: ಪಟ್ಟಣದ ಗ್ರಾಮದೇವತೆ ದ್ಯಾಮವ್ವ ಜಾತ್ರೆ ನಿಮಿತ್ತ ದೇವಸ್ಥಾನದಲ್ಲಿ ನಿತ್ಯ ಅಹೋರಾತ್ರಿ ಭಜನೆ ನಡೆಯುತ್ತಿದೆ. ಏ.10ರಿಂದ ಆರಂಭಗೊಂಡಿರುವ ಸಪ್ತ ಭಜನೆ 16ರ ವರೆಗೆ ನಡೆಯಲಿದ್ದು, ಭಜನೆ ಆಲಿಸಲು ಪಟ್ಟಣದ ಅಲ್ಲಲ್ಲಿ ಧ್ವನಿವರ್ಧಕ ಅಳವಡಿಸಲಾಗಿದೆ.

ವಿವಿಧ ಭಜನಾ ಮಂಡಳಿ ಸೇರಿದಂತೆ ವಿವಿಧ ಸಮುದಾಯದವರು ಭಜನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶಿವನಾಮ ಜಪಿಸುತ್ತಿದ್ದು, ಪಟ್ಟಣದದಲ್ಲಿ ಜಾತ್ರೆಯ ಸಂಭ್ರಮದ ಜತೆಗೆ ಧಾರ್ಮಿಕ ವಾತಾವರಣ ಸೃಷ್ಟಿಯಾಗಿದೆ. 65 ವರ್ಷಗಳ ನಂತರ ನಡೆಯುತ್ತಿರುವ ದೇವಿ ಜಾತ್ರೆಯ ಧಾರ್ಮಿಕ ಕಾರ್ಯಕ್ರಮಗಳು ಏ.9ರಿಂದ 20ರವರೆಗೆ ನಡೆಯಲಿವೆ. ದೇವಸ್ಥಾನಕ್ಕೆ ಬರುವ ಭಕ್ತರಿಗೆ ನಿತ್ಯ ಅನ್ನದಾಸೋಹ ವ್ಯವಸ್ಥೆ ಕಲ್ಪಿಸಲಾಗಿದೆ. ಬೂಂದಿ, ಗೋಧಿ ಹುಗ್ಗಿ ಹೀಗೆ ನಿತ್ಯ ಬಗೆಬಗೆಯ ಭಕ್ಷ್ಯ ತಯಾರಿಸಿ ಉಣಬಡಿಸಲಾಗುತ್ತಿದೆ. ಪಟ್ಟಣದ ವಿವಿಧ ವಾರ್ಡ್‌ನ ಮಹಿಳೆಯರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net