ಕುಷ್ಟಗಿಯಲ್ಲಿ ಷತ್‌ಚಂಡಿ ಮಹಾಯಜ್ಞಕ್ಕೆ ವಿದ್ಯುಕ್ತ ಚಾಲನೆ

26092022 kustagi durga temple chandi yaga
Published on

ಕುಷ್ಟಗಿ: ಪಟ್ಟಣದ ದುರ್ಗಾ ಪರಮೇಶ್ವರಿ ದೇವಸ್ಥಾನ ಆವರಣದಲ್ಲಿ ವಿವಿಧ ನಾಗಾ ಸಾಧುಗಳು ಹಾಗೂ ಸ್ವಾಮೀಜಿಗಳ ನೇತೃತ್ವದಲ್ಲಿ ಷತ್ ಚಂಡಿ ಮಹಾಯಜ್ಞ ಸೋಮವಾರ ಆರಂಭವಾಯಿತು.

ಶರನ್ನವರಾತ್ರಿ ನಿಮಿತ್ತ ಲೋಕಕಲ್ಯಾಣಾರ್ಥ ನಡೆಸಲಾಗುತ್ತಿರುವ ಮಹಾಯಜ್ಞ ಅ.4ರ ವರೆಗೆ ನಡೆಯಲಿದ್ದು, ಶೋಭಾ ಯಾತ್ರೆ ಮೂಲಕ ಚಾಲನೆ ನೀಡಲಾಯಿತು. ಪಟ್ಟಣದ ಪ್ರಮುಖ ಬೀದಿಗಳ ಮುಖಾಂತರ ತಾವರಗೇರಾ ರಸ್ತೆಯಲ್ಲಿರುವ ದುರ್ಗಾಪರಮೇಶ್ವರಿ ದೇವಸ್ಥಾನ ವರೆಗೆ ನಡೆದ ಶೋಭಾ ಯಾತ್ರೆಯಲ್ಲಿ ಪಟ್ಟಣದ ಅಮರನಾಥೇಶ್ವರ ಮಹಾದೇವ ಮಠದ ಮಹಾಂತ ಸಹದೇವಾನಂದ ಗುರುಜೀ, ನಿಡಶೇಸಿ ಮಠದ ಚನ್ನಬಸವ ಶಿವಾಚಾರ್ಯ ಸ್ವಾಮೀಜಿ ಸೇರಿ ವಿವಿಧೆಡೆಯಿಂದ ಆಗಮಿಸಿದ್ದ ನಾಗಾಸಾಧುಗಳು ಪಾಲ್ಗೊಂಡಿದ್ದರು.

ಡೊಳ್ಳು ಕುಣಿತ, ವಿವಿಧ ವಾದ್ಯ ವೃಂದದೊಂದಿಗೆ ತೆರಳಿದ ಶೋಭಾ ಯಾತ್ರೆಯಲ್ಲಿ ನೂರಾರು ಮಹಿಳೆಯರು ಕುಂಭ ಹೊತ್ತು ಸಾಗಿದರು. ಮಾಜಿ ಶಾಸಕ ದೊಡ್ಡನಗೌಡ ಪಾಟೀಲ್, ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಉಮೇಶ್ ಯಾದವ್, ಜಿಪಂ ಮಾಜಿ ಸದಸ್ಯ ಕೆ.ಮಹೇಶ್, ವರ್ತಕರ ಸಂಘದ ಅಧ್ಯಕ್ಷ ಮಹಾಂತಯ್ಯ ಅರಳೆಲೆಮಠ ಸೇರಿ ತಾಲೂಕಿನ ವಿವಿಧ ಗ್ರಾಮಗಳ ನೂರಾರು ಜನ ಶೋಭಾ ಯಾತ್ರೆಗೆ ಸಾಕ್ಷಿಯಾದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net