ಡಿವೈಡರ್‌ಗೆ ಕಾರು ಡಿಕ್ಕಿಯಾಗಿ ಒಬ್ಬ ಸಾವು

Published on

ಕುಷ್ಟಗಿ: ಪಟ್ಟಣ ಹೊರವಲಯದ ಚತುಷ್ಪಥ ರಾಷ್ಟ್ರೀಯ ಹೆದ್ದಾರಿಯ ಜಿಯೋ ಪೆಟ್ರೋಲ್ ಬಂಕ್ ಬಳಿಯ ರಸ್ತೆ ಡಿವೈಡರ್‌ಗೆ ಕಾರು ಡಿಕ್ಕಿಯಾಗಿ ಅದರಲ್ಲಿದ್ದ ವಿಜಯಪುರ ಜಿಲ್ಲೆ ಇಂಡಿ ಮೂಲದ ದರ್ಶನ್ ಪಾಂಡ್ರೆ (19) ಸ್ಥಳದಲ್ಲಿ ಬುಧವಾರ ಬೆಳಗ್ಗೆ ಮೃತಪಟ್ಟಿದ್ದು, ಮೂವರು ಸ್ನೇಹಿತರು ಗಾಯಗೊಂಡಿದ್ದಾರೆ.

ಮೃತ ದರ್ಶನ್ ಹಾಗೂ ಗಾಯಾಳುಗಳಾದ ಅಭಿಷೇಕ ದಳವಾಯಿ, ವೀರೇಶ ಮಂದೇಲಿ ಹಾಗೂ ಆದಿತ್ಯ ಬನಸೋಡೆ ಧಾರವಾಡದ ಹಂಚಿನಮನಿ ವಿದ್ಯಾಪೀಠದಲ್ಲಿ ವ್ಯಾಸಂಗ ಮಾಡುತ್ತಿದ್ದರು. ಪ್ರವಾಸ ಮುಗಿಸಿ ಹಿಂತಿರುತ್ತಿದ್ದಾಗ ಅವಘಡ ಸಂಭವಿಸಿದೆ. ಕಾರು ಚಾಲಕ ಬಾಗಲಕೋಟೆ ಜಿಲ್ಲೆ ಮುಧೋಳದ ಸೋಹೈಲ್ ಇಂಡಿಕಾರ್ ವಿರುದ್ಧ ಪಟ್ಟಣದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net