ಆಯುಷ್ಯ-ಆರೋಗ್ಯ ವೃದ್ಧಿಗೆ ಧನ್ವಂತರಿ ಹೋಮ

DHANVANTARI
ಕುಷ್ಟಗಿಯ ಬುತ್ತಿಬಸವೇಶ್ವರ ದೇವಸ್ಥಾನದಲ್ಲಿ ಧನ್ವಂತರಿ ಜಯಂತಿ ನಿಮಿತ್ತ ಶನಿವಾರ ಹೋಮ-ಹವನ ನೆರವೇರಿಸಲಾಯಿತು. ಪುರೋಹಿತ ಜಗದೀಶಯ್ಯ ಇದ್ದರು.
Published on

ಕುಷ್ಟಗಿ: ಧನ್ವಂತರಿ ಜಯಂತಿ ನಿಮಿತ್ತ ಪಟ್ಟಣದ ಬುತ್ತಿಬಸವೇಶ್ವರ ದೇವಸ್ಥಾನದಲ್ಲಿ ಲೋಕ ಕಲ್ಯಾಣಾರ್ಥ ಧನ್ವಂತರಿ ಹೋಮ-ಹವನ, ವಿಶೇಷ ಪೂಜಾ ಕೈಂಕರ್ಯಗಳು ನಡೆದವು. ಆಯುಷ್ ವೈದ್ಯರ ಸಂಘ ಏರ್ಪಡಿಸಿದ್ದ ಪೂಜಾ ಕಾರ್ಯವನ್ನು ಪಟ್ಟಣದ ಪುರೋಹಿತ ಜಗದೀಶಯ್ಯ ನೆರವೇರಿಸಿದರು.

ರೋಗಿಗಳು ಗುಣಮುಖರಾಗಲಿ, ಜನರ ಆರೋಗ್ಯ, ಆಯುಷ್ಯ ವೃದ್ಧಿಯಾಗಲಿ ಎಂಬ ಉದ್ದೇಶದಿಂದ ಧನ್ವಂತರಿ ಹೋಮ ನೆರವೇರಿಸಲಾಗಿದೆ ಎಂದು ಪುರೋಹಿತ ಜಗದೀಶಯ್ಯ ತಿಳಿಸಿದರು. ಆಯುಷ್ ವೈದ್ಯರಾದ ರವಿ ದಾನಿ ಹಾಗೂ ಬಸವರಾಜ ವಸ್ತ್ರದ್ ಧನ್ವಂತರಿ ಜಯಂತಿ ವಿಶೇಷತೆ ಕುರಿತು ಮಾತನಾಡಿದರು.

ವೈದ್ಯರಾದ ಎನ್.ಎಸ್.ಪಾಟೀಲ್, ಬಿ.ಎಂ.ಗೌಡರ್, ಅಣ್ಣಾರಾವ್, ಸಿ.ಎಸ್.ಹುಣಸಿಹಾಳ, ಮಲ್ಲಪ್ಪ ಪಲೋಟಿ, ಸಂತೋಷ ಹಾದಿಮನಿ, ಸಂಗಮೇಶ ಪಾಟೀಲ್, ಕುಶಾಲ್, ಅಕ್ಷತಾ ಗೊಂಡಬಾಳ, ವೇದಾವತಿ ಪಾಟೀಲ್, ಸುಶೀಲ್ ಕಾಖಂಡಕಿ, ಮಂಜುನಾಥ ಗೊಂಡಬಾಳ, ಪ್ರಮುಖರಾದ ಬಾಲಾಜಿ ಬಳಿಗಾರ, ಮಹೇಶ ಹಿರೇಮಠ, ವಿಠ್ಠಲ್ ಮಿಸ್ಕಿನ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net