ಬನ್ನಿ ಮಹಾಂಕಾಳಿಗೆ ಪೂಜೆ

kst-2
ಕುಷ್ಟಗಿ ತಾಲೂಕಿನ ಕಡೇಕೊಪ್ಪ ಗ್ರಾಮದಲ್ಲಿ ಮಹಿಳೆಯರು ಬನ್ನಿ ಮಹಾಂಕಾಳಿ ದೇವಿಗೆ ಪೂಜೆ ಸಲ್ಲಿಸಿದರು.
Published on

ಕುಷ್ಟಗಿ: ಪಟ್ಟಣ ಸೇರಿದಂತೆ ತಾಲೂಕಿನ ವಿವಿಧೆಡೆ ದಸರಾ ಹಬ್ಬವನ್ನು ಶ್ರದ್ಧಾ-ಭಕ್ತಿಯ ಜತೆಗೆ ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಬುಧವಾರ ವಿವಿಧ ಅಂಗಡಿಕಾರರು ಆಯುಧ ಪೂಜೆ ನೆರವೇರಿಸಿದರು.

ಮನೆಗಳಲ್ಲಿಯೂ ಬೈಕ್ ಇನ್ನಿತರ ವಾಹನಗಳ ಜತೆಗೆ ಮಕ್ಕಳ ಪಠ್ಯಪುಸ್ತಕಗಳನ್ನಿಟ್ಟು ಪೂಜಿಸಿದ್ದು ಕಂಡುಬಂತು. ವಿಜಯದಶಮಿಯ ದಿನದಂದು ಮಹಿಳೆಯರು ಬನ್ನಿ ಮಹಾಂಕಾಳಿಗೆ ಉಡಿ ತುಂಬಿ ಪೂಜೆ ಸಲ್ಲಿಸಿದರು. ಹಬ್ಬದ ನಿಮಿತ್ತ ಅನ್ನ ಸಂತರ್ಪಣೆ ಕಾರ್ಯ ನಡೆಯಿತು.

ತಾಲೂಕಿನ ಕಡೇಕೊಪ್ಪ ಗ್ರಾಮದಲ್ಲಿ ಬನ್ನಿ ಮಹಾಂಕಾಳಿಗೆ ಪೂಜೆ ಸಲ್ಲಿಸುತ್ತಿದ್ದ ಮಹಿಳೆಯರ ದೃಶ್ಯ ಗುರುವಾರ ಕಂಡುಬಂತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net