ಜಿಟಿಜಿಟಿ ಮಳೆಗೆ ಜನಜೀವನ ಅಸ್ತವ್ಯಸ್ತ; ಕುಷ್ಟಗಿ ವಾರದ ಸಂತೆಯಲ್ಲಿ ಪರದಾಡಿದ ವ್ಯಾಪಾರಿಗಳು

11122022 Kustagi Rain
Published on

ಕುಷ್ಟಗಿ: ಮಾಂಡೌಸ್ ಚಂಡಮಾರುತದ ಪರಿಣಾಮ ಪಟ್ಟಣ ಸೇರಿ ತಾಲೂಕಿನಲ್ಲಿ ಜಿಟಿಜಿಟಿ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಭಾನುವಾರ ವಾರದ ಸಂತೆಯ ದಿನವಾಗಿದ್ದು, ತರಕಾರಿ ಸೇರಿದಂತೆ ಇತರ ಅಗತ್ಯ ವಸ್ತುಗಳನ್ನು ಪಟ್ಟಣದ ಮಾರುಕಟ್ಟೆಗೆ ತಂದಿದ್ದ ವ್ಯಾಪಾರಿಗಳು ತೀವ್ರ ಪರದಾಡಿದರು.

ಎರಡು ದಿನಗಳಿಂದ ಚಳಿ ಹೆಚ್ಚಾಗಿ ಶೀತಗಾಳಿ ಬೀಸಲಾರಂಭಿಸಿತ್ತು. ಶನಿವಾರ ಇಡೀ ದಿನ ಮಳೆಯಾಗುವ ಯಾವುದೇ ಮುನ್ಸೂಚನೆ ಇರಲಿಲ್ಲ. ರಾತ್ರಿ ಜಿಟಿಜಿಟಿಯಾಗಿ ಶುರುವಾದ ಮಳೆ ಹಗಲಿನಲ್ಲಿಯೂ ಮುಂದುವರಿದಿದೆ. ಚಳಿ ಜತೆಗೆ ಮಳೆಯೂ ಆಗುತ್ತಿರುವುದರಿಂದ ಜನ ಮನೆ ಬಿಟ್ಟು ಹೊರಬರದಂತಾಗಿದೆ. ವಾರದ ಸಂತೆಯ ದಿನ ಜನರಿಂದ ತುಂಬಿರುತ್ತಿದ್ದ ಪಟ್ಟಣದ ಪ್ರಮುಖ ರಸ್ತೆಗಳು ಹಾಗೂ ಮಾರುಕಟ್ಟೆ ಬಿಕೋ ಎನ್ನುತ್ತಿದ್ದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net